Asianet Suvarna News Asianet Suvarna News

ಜುಲೈ 12ಕ್ಕೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ! ಸಂಗೀತ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬ ಮಸ್ತ್ ಡ್ಯಾನ್ಸ್‌!

ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ. ಸ್ವರ್ಗದಲ್ಲಿ ನಡೆಯೋ ಮದುವೆ ಹೇಗಿರುತ್ತೆ ಅಂತ ಕೆಲ ಸಿನಿಮಾಗಳಲ್ಲಿ ನೋಡಿರ್ತೀರಾ. ಪುಸ್ತಕದಲ್ಲಿ ಓದಿರುತ್ತೀರ. ಅಂತಹ ಸ್ವರ್ಗದ ಮದುವೆ ಈಗ ಭೂಲೋಕದಲ್ಲೇ ನಡೆದಿದೆ. ಭಾರತ ದೇಶದ ಆಗರ್ಭ ಶ್ರೀಮಂತ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿ ಮಗನ ಮದುವೆ.

ಅನಂತ್ ಅಂಬಾನಿ ಮದುವೆ ಸ್ವರ್ಗದಲ್ಲಿ  ಮದುವೆ ಆದಂತೆ ನಡೆಯುತ್ತಿದೆ. ಮದುವೆ ಆಗೋ ಪ್ರತಿ ಜೋಡಿಗೂ ನಾವು ಹೀಗೆ ಮದುವೆ ಆಗ ಬೇಕು ಹಾಗೆ ಆಗಬೇಕು ಅಂತ ಆಸೆ ಕನಸಿರುತ್ತೆ. ಆದ್ರೆ ಸ್ವರ್ಗದ ಮದುವೆಗೂ(Marrige) ಕಿಚ್ಚು ಹಚ್ಚುವಂತೆ ವಿವಾಹ ಆಗುತ್ತಿದ್ದಾರೆ ಅನಂತ್ ಅಂಬಾನಿ (Ananth Ambani) ರಾಧಿಕಾ ಮರ್ಚೆಂಟ್(Radhika Merchant).. ಈ ಜೋಡಿಯ ಕಲ್ಯಾಣೋತ್ಸವ ಜುಲೈ 12ಕ್ಕೆ ನಡೆಯಲಿದೆ. ಆದಾಗ್ಲೆ ಮದುವೆ ಕಳೆ ಕಟ್ಟಿದ್ದು, ಅಂಬಾನಿ ಕುಟುಂಬ ಸಂಗೀತ್ ಕಾರ್ಯಕ್ರಮದಲ್ಲಿ(Sangeet program) ವಿಜೃಂಭಿಸಿದೆ. ಈ ಸಂಗೀತ ಸಮಾರಂಭದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಶಾರುಖ್ ಖಾನ್ ರ ಓಂ ಶಾಂತಿ ಓಂ ಸಿನಿಮಾದ ದೀವಾಂಗಿ ದೀವಾಂಗಿ ಹಾಡಿಗೆ ಗ್ರೂಪ್ ಡ್ಯಾನ್ಸ್(Dance)ಮಾಡಿದ್ದಾರೆ. ಸರ್ಗದಲ್ಲಿ ನಡೆಯೋ ಮದುವೆಗಳಲ್ಲಿ ಸೂರ್ಯ ಚಂದ್ರರು ಮಿನುಗುತ್ತಿದ್ರಂತೆ, ಒಂದ್ ಕಡೆ ನರ್ತಕಿರ ಡಾನ್ಸ್ ವೈಭವ ಇರುತ್ತೆ, ಮತ್ತೊಂದ್ ಕಡೆ ದೊಳ್ಳು ನಗಾರಿಗಳ ಸದ್ದು ಝೇಂಕರಿಸುತ್ತೆ. ಇತ್ತು ಆ ಮದುವೆ ಅಂತಯೇ ಅನಂತ್ ರಾಧಿಕಾ ಸಂಗೀತ ಕಾರ್ಯಕ್ರಮ ನಡೆದಿದೆ. ಈ ಸಂಗೀತ್ ಕಾರ್ಯಕ್ರಮದಲ್ಲಿ ಅಂಬಾನಿ ಮಗನ ಹಿಂದೆ ನಿಂತು ನಟ ಸಲ್ಮಾನ್ ಖಾನ್ಸ್ ಡಾನ್ಸರ್ ರೀತಿ ಕುಣಿದಿದ್ದಾರೆ. ಅಂಬಾನಿ ಕುಟುಂಬ ಮುಂಬೈನಲ್ಲಿರೋ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಸಂಗೀತ ಸಮಾರಂಭ ಮಾಡಿದೆ. ಈ  ಕಾರ್ಯಕ್ರಮಕ್ಕೆ ಖ್ಯಾತ ಕ್ರಿಕೆಟಿಗರು ಬಾಲಿವುಡ್‌ಸೆಲಿಬ್ರಿಟಿಸ್‌ಭಾಗಿಯಾಗಿದ್ರು. ಧೋನಿ ದಂಪತಿ, ಜಹೀರ್ ಖಾನ್ ದಂಪತಿ ಹಾಗು ಬಾಲಿವುಡ್‌ಸೆಲೆಬ್ರಿಟಿಗಳಾದ ರಣಬೀರ್‌ಕಪೂರ್‌, ಆಲಿಯಾ ಭಟ್‌, ಅನನ್ಯಾ ಭಟ್ ಸೇರಿದಂತೆ ಕೆಲ ಸ್ಟಾರ್ಗಳು ಭಾಗಿಯಾಗಿದ್ರು.

ಇದನ್ನೂ ವೀಕ್ಷಿಸಿ:  ಮಿಲನ ಪ್ರಕಾಶ್ ವಿಚಾರಣೆ ಮಾಡಿದ್ದೇಕೆ ಪೊಲೀಸರು ? 'ಡೆವಿಲ್' ನಿರ್ದೇಶಕರಿಗೂ ದರ್ಶನ್ ಕೇಸ್‌ಗೂ ಏನು ಸಂಬಂಧ?

Video Top Stories