ಹೊಯ್ಸಳ ಚಿತ್ರದ ಬಲಿ ಈಗ 'ಕ್ಷೇತ್ರಪತಿ': ಉತ್ತರ ಕರ್ನಾಟಕದ ಕಥೆಗೆ ಜೀವ ತುಂಬಿದ ಗುಳ್ಟು ನವೀನ್!
ಶ್ರೀಕಾಂತ್ ಕಟಗಿ ಕ್ಷೇತ್ರಪತಿ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ.
ಉತ್ತರ ಕರ್ನಾಟಕದ ಯುವ ನಟ ನವೀನ ಶಂಕರ್ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಇಲ್ಲಿತನಕ ಅವರು ನಟಿಸಿದ ಎಲ್ಲ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಇದೀಗ ಕ್ಷೇತ್ರಪತಿಯಾಗಿ ನಾಲ್ಕನೇ ಚಿತ್ರದಲ್ಲಿ ಉತ್ತರ ಕರ್ನಾಟಕದ ಖಡಕ್ ರೈತನ ಪಾತ್ರದಲ್ಲಿ ಸಹಜ ಅಭಿನಯದೊಂದಿಗೆ ಥ್ರಿಲ್ ಮೂಡಿಸಿದ್ದಾರೆ. ಟೀಸರ್ ಬೆಂಕಿಗುರು ಎನ್ನುತ್ತಿದ್ದಾರೆ ಕ್ಷೇತ್ರಪತಿ ಟೀಸರ್ ನೋಡಿದವರು. ಕ್ಷೇತ್ರಪತಿ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ಯಾವುದೇ ದೊಡ್ಡ ಹೀರೋ ಬ್ಯುಲ್ಡಪ್ ಇಲ್ಲ, ದೊಡ್ಡ ಫೈಟಿಂಗ್ ಇಲ್ಲ ನೈಜನಟನೆಯೊಂದಿಗೆ ಜನಮನ ಗೆದ್ದಿದೆ. ಅರ್ಚನಾ ಜೋಯಿಸಾ ನಿರೂಪಣಾ ರೀತಿ ಅದ್ಭುತವಾಗಿದೆ. ಅನ್ನ ಬೆಳೆಯೋ ಮಣ್ಣಿಗೆ ರೈತನೇ ಕ್ಷೇತ್ರಪತಿ ಎನ್ನುವ ಖಡಕ್ ಡೈಲಾಗ್ ಅಷ್ಟೇ ಖಡಕ್ ಆಗಿದೆ.
ಇದನ್ನೂ ವೀಕ್ಷಿಸಿ: ರಾಕಿಭಾಯ್ 19ನೇ ಚಿತ್ರದ ಬಿಗ್ ನ್ಯೂಸ್: ಯಶ್ ಸಿನಿಮಾಗೆ ಇವರೇ ಡೈರೆಕ್ಟರ್ ?