ರಾಕಿಭಾಯ್ 19ನೇ ಚಿತ್ರದ ಬಿಗ್ ನ್ಯೂಸ್: ಯಶ್ ಸಿನಿಮಾಗೆ ಇವರೇ ಡೈರೆಕ್ಟರ್ ?
ಯಶ್ 19ಗೆ ಇವರೇ ನೋಡಿ ಡೈರೆಕ್ಟರ್!
ಬೆಂಗಳೂರಲ್ಲೆ ಇದ್ದಾರಂತೆ ನಿರ್ದೇಶಕಿ
ಯಾರೀ ನಿರ್ದೇಶಕಿ ಗೀತು ಮೋಹನ್ದಾಸ್?
ಇತ್ತೀಚೆಗಷ್ಟೆ ರೇಂಜ್ ರೋವರ್ ತೆಗೆದುಕೊಂಡ ಯಶ್ ರನ್ನ ಅಭಿಮಾನಿಗಳು ಕೆಜಿಎಫ್ ಸಿನಿಮಾ ಯಶ್ ರೇಂಜ್ ಬದಲಾಯಿಸಿತು. ಈಗ ಕೆಜಿಎಫ್ ಸಿನಿಮಾನೂ ಮೀರಿಸೋ ಕತೆ ಮಾಡಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು. ಇದೀಗ ಯಶ್ ವೇವ್ ಲೆಂಥ್‌ಗೆ ಮ್ಯಾಚ್ ಆಗುವ, ಅವರ ಕಲ್ಪನೆ ಕನಸಿಗೆ ರೆಕ್ಕೆಕಟ್ಟೊ ನಿರ್ದೇಶಕರು ಸಿಕ್ಕಾಗಿದೆಯಂತೆ. ಅದೂ ನಿರ್ದೇಶಕಿ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ.ಯಶ್ ಈಗಾಗಲೇ ಕಳ್ಳರಸಂತೆ ಚಿತ್ರಕ್ಕಾಗಿ ಮಹಿಳಾ ನಿರ್ದೇಶಕಿ ಸುಮನ್ ಜೊತೆ ಕೆಲಸ ಮಾಡಿದ್ದಾರೆ. ಗೀತು ಮೋಹನ್ ಯಶ್ ಮುಂದಿನ ಸಿನಿಮಾ ನಿರ್ದೇಶಕಿ ಎನ್ನಲಾಗಿದೆ. ಎರಡು ಮೂರು ವರ್ಷದಿಂದ ಇದಕ್ಕಾಗಿ ಯಶ್ ತಪಸ್ಸು ಮಾಡಿದ್ದಾರೆ. ಹಲವಾರು ಸ್ಟಾರ್ ಡೈರೆಕ್ಟರ್‌ಗಳು ಭೇಟಿ ಮಾಡಿದ್ದಾರೆ.ಆಗಲೇ ಬಂದು ನಿಂತರು ಗೀತು ಮೋಹನ್‌ದಾಸ್.ಯಶ್ 19, ಭಕ್ತಗಣ ಈ ಸಿನಿಮಾದ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಬರೀ ಫ್ಯಾನ್ಸ್ ಮಾತ್ರ ಅಲ್ಲ,ಇಡೀ ವಿಶ್ವವೇ ರಾಕಿಭಾಯ್ ಇಡುವ ಹೊಸ ಹೆಜ್ಜೆಯನ್ನು ಕಣ್ಣುಜ್ಜಿಕೊಂಡು ಕಾಯುತ್ತಿದೆ.
ಇದನ್ನೂ ವೀಕ್ಷಿಸಿ: ‘ಅನ್ಯಾಯಕಾರಿ ಬ್ರಹ್ಮ...’ 28 ವರ್ಷಗಳಷ್ಟು ಹಳೆಯ ಹಾಡು: ವೈರಲ್ ಆದ ಮಳವಳ್ಳಿ ಕಲಾವಿದ ಮಹದೇವಸ್ವಾಮಿ