'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾಗೆ ಕಂಟಕ.! ಕೆಂಪೇಗೌಡರ ಬಗ್ಗೆ ಸಿನಿಮಾ ಮಾಡಂಗಿಲ್ಲ ಎಂದ ನಾಗಾಭರಣ!
ನಾಡಪ್ರಭು ಕೆಂಪೇಗೌಡ.. ಬೆಂಗಳೂರು ನಿರ್ಮಾತೃ. ಇವರ ಬಗ್ಗೆ ಒಂದು ಬಯೋಪಿಕ್ ಸಿನಿಮಾ ಬರಬೇಕು ಅನ್ನೋದು ಹಲವರ ಆಸೆ ಮತ್ತು ನಿರೀಕ್ಷೆ. ಆ ಆಸೆ ನಿರೀಕ್ಷೆಗೆ ನೀರೆರೆಯೋ ಕೆಲಸ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗಿತ್ತು. ನಾಡಪ್ರಭು ಕೆಂಪೇಗೌಡರ ಜೀವನಾಧಾರಿತ ಸಿನಿಮಾ ಅನೌನ್ಸ್ ಆಗಿತ್ತು. ದಿನೇಶ್ ಬಾಬು ನಿರ್ದೇಶನದಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಘೋಷಣೆ ಆಗಿತ್ತು.
ನಾಡಪ್ರಭು ಕೆಂಪೇಗೌಡರ ಜೀವನಾಧರಿತ ಸಿನಿಮಾ ಮಾಡಲು ನಾನಾ? ನೀನಾ? ಎನ್ನುವ ಹಗ್ಗಜಗ್ಗಾಟ ಶುರುವಾಗಿದೆ. ಇತ್ತೀಚೆಗೆ ದಿನೇಶ್ ಬಾಬು ನಿರ್ದೇಶನದಲ್ಲಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ(Dharmabheeru Nadaprabhu Kempegowda) ಅನೌನ್ಸ್ ಆಗಿತ್ತು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಆದ್ರೆ ಈ ಚಿತ್ರ ಆರಂಭಕ್ಕೂ ಮೊದಲೇ ಕಂಟಕ ಎದುರಾಗಿದೆ. ನಿರ್ದೇಶಕ ಟಿ.ಎಸ್. ನಾಗಾಭರಣ(T.S. Nagabharana) ಮತ್ತು ನಿರ್ಮಾಪಕ ಡಾ ಎಂ ಎನ್ ಶಿವರುದ್ರಪ್ಪ ನಾವು ಕೆಂಪೇಗೌಡರ(Nadaprabhu Kempegowda) ಜೀವನವನ್ನಾಧರಿಸಿ ಸಿನಿಮಾ ಮಾಡುತ್ತಿದ್ದೇವೆ. ಹಾಗಾಗಿ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಗ ಕೋರ್ಟ್ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ.
ಅತ್ತ ನಾಗಾಭರಣ ಮತ್ತವರ ತಂಡ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಇತ್ತ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ನಿರ್ಮಾಪಕ ಕಿರಣ್ ತೋಟಂಬೈಲ್ ನಾಗಾಭರಣ ವಾದಕ್ಕೆ ಡೋಟ್ ಕೇರ್ ಎನ್ನುತ್ತಿಲ್ಲ. ನಮ್ಮದು ಪ್ಯಾನ್ ವರ್ಲ್ಡ್ ಸಿನಿಮಾ. ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದೇವೆ. ಇದು ಬ್ರಿಟೀಷ್ ಕೌನ್ಸಿಲ್, ಐಎಂಡಿಬಿ ಎಲ್ಲರದಲ್ಲೂ ನಮ್ಮ ಸಿನಿಮಾ ರಿಜಿಸ್ಟರ್ ಆಗಿದೆ. ಇಂಗ್ಲೀಷ್ ಸಿನಿಮಾ ಆಗಿರುವುದರಿಂದ ಇಲ್ಲಿನ ಕಾನೂನು ಅದಕ್ಕೆ ತೊಡಕಾಗುವುದಿಲ್ಲ ಕೆಂಪೇಗೌಡರ ಕಥೆ ಇತಿಹಾಸ. ಇದನ್ನು ಕಾಪಿರೈಟ್ ಮಾಡುತ್ತೇವೆ ಎನ್ನುವುದು ತಪ್ಪಾಗುತ್ತದೆ. ಅದು ಅವರ ದಡ್ಡತನ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಲೀಗಲ್ ಟೀಂ ಕೋರ್ಟ್‌ನಲ್ಲಿ ಇದಕ್ಕೆ ಉತ್ತರ ಕೊಡುತ್ತಾರೆ ಎಂದಿದ್ದಾರೆ.
ಇದನ್ನೂ ವೀಕ್ಷಿಸಿ: 'ಕಲ್ಕಿ 2898 AD' ಚಿತ್ರದ ಅಶ್ವಥಾಮ ಟೀಸರ್ ರಿಲೀಸ್..! ಅಶ್ವಥಾಮನಾಗಿ ಎದ್ದು ಬಂದ ಬಿಗ್ ಬಿ ಅಮಿತಾ ಬಚ್ಚನ್..!