Asianet Suvarna News Asianet Suvarna News

ಈ ವಾರ ಕನ್ನಡ ಸಿನಿ ಪ್ರೇಕ್ಷಕರಿಗೆ ಕ್ರೈಂ ಥ್ರಿಲ್ಲರ್ ಸಿನಿಮಾ ಟ್ರೀಟ್.! ಸಿನಿ ಪ್ರೇಮಿಗಳ ಮನಸ್ಸು ಗೆದ್ದ 'ಮಿ.ನಟ್ವರ್‌ಲಾಲ್'..!

ಸ್ಯಾಂಡಲ್‌ವುಡ್‌ ಸಿನಿ ಪ್ರೇಕ್ಷಕರಿಗೆ ವಾರಕ್ಕೊಂದು ಅದ್ಭುತ ಸಿನಿಮಾ ಹೂರಣ ಸಿಗುತ್ತಿದೆ. ಕಳೆದ ವಾರ ಬಿಡುಗಡೆ ಆಗಿದ್ದ ಶಾಕಹಾರಿ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಈಗ ಈ ವಾರ ಸ್ಯಾಂಡಲ್‌ವುಡ್ ಮಂದಿಗೆ ಮತ್ತೊಂದು ಸಿನಿಮಾ ಮನ ಪೂರ್ತಿ ಹಿಡಿಸಿದೆ. ಆ ಸಿನಿಮಾವೇ ಮಿಸ್ಟರ್ ನಟ್ವರ್ ಲಾಲ್. 

ಮಡಮಕ್ಕಿ, ನಂಜುಂಡಿ ಕಲ್ಯಾಣ2 ಚಿತ್ರಗಳಲ್ಲಿ ನಟಿಸಿದ್ದ ತನುಷ್ ಶಿವಣ್ಣ(Tanush Shivanna) ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಮಿಸ್ಟರ್ ನಟ್ವರ್ ಲಾಲ್(Mr. Natwarlal). ಈ ಸಿನಿಮಾಲ್ಲಿ 8 ಡಿಫರೆಂಟ್ ಅವತಾರಗಳಲ್ಲಿ ನಟ ತನುಷ್ ಕಾಣಿಸಿಕೊಂಡಿದ್ದಾರೆ. ತನುಷ್ ಶಿವಣ್ಣಾಗೆ ನಾಯಕಿಯಾಗಿ ಪಂಚತಂತ್ರ ಬನಾರಸ್ ಮತ್ತು ಗರಡಿ ಚಿತ್ರಗಳ ನಾಯಕಿ ಸೋನಲ್ ಮಂಥೋರೋ ನಟಿಸಿದ್ದಾರೆ. ಡೈರೆಕ್ಟರ್ ಲವ ಆಕ್ಷನ್ ಕಟ್ ಹೇಳಿರೋ ಮಿಸ್ಟರ್ ನಟ್ವರ್ ಲಾಲ್ ಸಿನಿಮಾದಲ್ಲಿ ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಎಲ್ಲಾ ಇದೆ. ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಟ ರಾಜೇಶ್ ನಟರಂಗ, ಯಶ್ ಶೆಟ್ಟಿ, ಹರಿಣಿ, ವಿಜಯ್ ಚೆಂಡೂರ್, ಕಾಕ್ರೋಚ್ ಸುಧಿ, ಕಾಂತರಾಜ್ ಕಡ್ಡಿಪುಡಿ ಅದ್ಭತವಾಗಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮಿಸ್ಟರ್ ನಟ್ವಲ್ ಲಾಲ್ ಕೂಡ ಭಾರಿ ಎಂಟರ್ಟೈನ್ಮೆಂಟ್ ಕೊಡುತ್ತಿದೆ. 

ಇದನ್ನೂ ವೀಕ್ಷಿಸಿ:  Karavali movie: ಸೆಟ್ಟೇರಿತು ಪ್ರಜ್ವಲ್ ನಟನೆಯ 'ಕರಾವಳಿ'ಸಿನಿಮಾ..! ಮುಹೂರ್ತದಲ್ಲಿ ಸ್ಪೆಷಲ್ ಅಟ್ರ್ಯಾಕ್ಷನ್ ಕೋಣ..!