Karavali movie: ಸೆಟ್ಟೇರಿತು ಪ್ರಜ್ವಲ್ ನಟನೆಯ 'ಕರಾವಳಿ'ಸಿನಿಮಾ..! ಮುಹೂರ್ತದಲ್ಲಿ ಸ್ಪೆಷಲ್ ಅಟ್ರ್ಯಾಕ್ಷನ್ ಕೋಣ..!

ತೆರೆಗೆ ಬರುತ್ತೆ ಮತ್ತೊಂದು 'ಕರಾವಳಿ' ಸಿನಿಮಾ.!
ಪ್ರಜ್ವಲ್ ನಟನೆಯ ಕರಾವಳಿ ಚಿತ್ರಕ್ಕೆ ಮಹೂರ್ಥ..!
ಮುಹೂರ್ತದಲ್ಲಿ  ಸ್ಪೆಷಲ್ ಅಟ್ರ್ಯಾಕ್ಷನ್ ಕೋಣ..!
 

Share this Video
  • FB
  • Linkdin
  • Whatsapp

ಕಾಂತಾರ ಸಿನಿಮಾ ಬಂದ ಮೇಲೆ ಕರಾವಳಿ ನಾಡಿನ ಒಂದೊಂದೇ ಕಥೆಗಳು ಸಿನಿಮಾ ಆಗುತ್ತಿವೆ. ಈಗ ಡೈಮಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್(Prajwal Devaraj) ಕೂಡ ಕರಾವಳಿ ಕಥೆಯ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಕರಾವಳಿ ಅಂತಲೇ ಹೆಸರಿಟ್ಟಿದ್ದು, ಬೆಂಗಳೂರಿನ(Bengaluru) ಪ್ರಸಿದ್ಧ ಬುಲ್ ಟೆಂಪಲ್ ನಲ್ಲಿ(Bull Temple) ಕರಾವಳಿ ಸಿನಿಮಾದ (Karavali Movie) ಮಹೂರ್ಥ ಆಗಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಕರಾವಳಿ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ರಜ್ವಲ್ ದೇವರಾಜ್ ನಾಯಕನಾಗಿದ್ದು, ನಾಯಕಿಯಾಗಿ ಸಂಪದಾ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತದ ಹೈಲೈಟ್ಸ್ ಎಂದರೆ ಕೋಣ. ಕರಾವಳಿ ಚಿತ್ರದ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕೋಣ ಪತ್ರಿಕಾಗೋಷ್ಠಿಗೂ ಹಾಜರಾಗಿದ್ದು ವಿಶೇಷವಾಗಿತ್ತು. ಈಗಾಗಲೇ ಕರಾವಳಿ ಸಿನಿಮಾ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇದನ್ನೂ ವೀಕ್ಷಿಸಿ: ದೊಡ್ಮನೆ ಕುಡಿ ಯುವ ಸಿನಿಮಾಗೆ ಭಾರಿ ಡಿಮ್ಯಾಂಡ್..! ಅಧಿಕ ಮೊತ್ತಕ್ಕೆ ಸೇಲ್ ಆಯ್ತು "ಯುವ" ಆಡಿಯೋ ಹಕ್ಕು..!

Related Video