Asianet Suvarna News Asianet Suvarna News

Mr. Natwarlal: ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ಕ್ರೈಂ ಥ್ರಿಲ್ಲರ್ ಚಿತ್ರ! ಫೆ. 23ಕ್ಕೆ ಮಿ. ನಟ್ವರ್‌ಲಾಲ್‌ ರಿಲೀಸ್!

ಕ್ರೈಂ ಥ್ರಿಲ್ಲರ್‌ ಚಿತ್ರ ಮಿಸ್ಟರ್ ನಟ್ವರ್‌ಲಾಲ್..!
ತನುಷ್ ಶಿವಣ್ಣ - ಸೋನಾಲ್ ಜೋಡಿಯ ಚಿತ್ರ
ವಿ.ಲವ ನಿರ್ದೇಶನದ ಚಿತ್ರ "Mr ನಟ್ವರ್ ಲಾಲ್"

ಗುಲ್ಟು,ರಂಗಿತರಂಗ, ದೃಶ್ಯಂ, ಶಾಖಾಹಾರಿ  ನಂತರ ಇದೀಗ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಬಾರೀ ಸದ್ದು ಮಾಡುತ್ತಿದೆ  ಮತ್ತೊಂದು ಕ್ರೈಮ್ ಥ್ರಿಲ್ಲರ್  ಚಿತ್ರ. ಅದೇ ಮಿಸ್ಟರ್ ನಟ್ವರ್‌ಲಾಲ್‌(Mr. Natwarlal). ಈ ಶುಕ್ರವಾರ ತೆರೆಗೆ ಸಿದ್ಧವಾಗಿದ್ದು  ಮಡಮಕ್ಕಿ, ನಂಜುಂಡಿ ಕಲ್ಯಾಣ ಚಿತ್ರಗಳಲ್ಲಿ ನಟಿಸಿದ್ದ ತನುಷ್ ಶಿವಣ್ಣ(Tanush Shivanna) ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು, 8 ಡಿಫರೆಂಟ್ ಅವತಾರಗಳಲ್ಲಿ ತನುಷ್ ಕಾಣಿಸಿಕೊಂಡಿದ್ದಾರೆ. ತನುಷ್ ಶಿವಣ್ಣಾಗೆ ನಾಯಕಿಯಾಗಿ ಪಂಚತಂತ್ರ, ಬನಾರಸ್ ಮತ್ತು ಗರಡಿ ಚಿತ್ರಗಳ ನಾಯಕಿ ಸೋನಲ್ ಮಂಥೋರೋ ನಾಯಕಿಯಾಗಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನಡೆದ ಕೆಲ ನೈಜ ಘಟನೆಗಳೇ ಸಿನಿಮಾಗೆ ಸ್ಪೂರ್ತಿ ಎನ್ನಲಾಗಿದ್ದು,  ಬೆಂಗಳೂರಿನಲ್ಲಿ ಬೆಚ್ಚಿಬೀಳೀಸಿದ ಸುಮಾರು ಏಳೆಂಟು ದೊಡ್ಡ ಪ್ರಕರಣಗಳನ್ನೆ ಸಿನಿಮಾದ ಕಥೆಯನ್ನಾಗಿಸಿಕೊಂಡು ಸಿನಿಮಾ ನಿರ್ದೇಶಿಸಿದ್ದಾರೆ ಡೈರೆಕ್ಟರ್ ಲವ.  ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಎಲ್ಲಾ ಇದೆ. ಬೆಂಗಳೂರು, ಮೈಸೂರು ಸಕಲೇಶಪುರ, ಮಂಗಳೂರು, ಸುತ್ತಮುತ್ತ 95 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಮ್ಮ ಜನರನ್ನು ಹ್ಯಾಕರ್ಸ್ ಹೇಗೆಲ್ಲಾ ವಂಚಿಸುತ್ತಾರೆ ಎಂಬುದು ಸಹ ಚಿತ್ರದಲ್ಲಿದೆ. ಇನ್ನು ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಟ ರಾಜೇಶ್ ನಟರಂಗ, ಯಶ್ ಶೆಟ್ಟಿ, ಹರಿಣಿ, ವಿಜಯ್ ಚೆಂಡೂರ್, ಕಾಕ್ರೋಚ್ ಸುಧಿ, ಕಾಂತರಾಜ್ ಕಡ್ಡಿಪುಡಿ ಮೊದಲಾದವರು ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಲೋಕಸಭೆ ಎಲೆಕ್ಷನ್‌ನಲ್ಲಿ ಡಾಲಿ ಧನಂಜಯ್ ಸೌಂಡು..! ಚುನಾವಣಾ ಅಖಾಡಕ್ಕೆ ಇಳಿತಾರಾ ನಟ ರಾಕ್ಷಸ ?

Video Top Stories