Asianet Suvarna News Asianet Suvarna News
breaking news image

ಲೋಕಸಭೆ ಎಲೆಕ್ಷನ್‌ನಲ್ಲಿ ಡಾಲಿ ಧನಂಜಯ್ ಸೌಂಡು..! ಚುನಾವಣಾ ಅಖಾಡಕ್ಕೆ ಇಳಿತಾರಾ ನಟ ರಾಕ್ಷಸ ?

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಧನಂಜಯ್ ಚಿತ್ರರಂಗದಲ್ಲಿ ಈಗ ಪೀಕ್‌ನಲ್ಲಿದ್ದಾರೆ. ಡಾಲಿ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ಸಕ್ಸಸ್ ಶಿಕರದಲ್ಲಿರೋ ಧನಂಜಯ್ ಬಗ್ಗೆ ಈಗ ಟಾಪ್ ಆಫ್ ದಿ ಮ್ಯಾಟರ್ ಆಗಿರೋದು ಧನಂಜಯ್ ರಾಜಕೀಯಕ್ಕೆ ಬರ್ತಾರೆ ಅನ್ನೋದು. ಈ ಭಾರಿ ಲೋಕಸಭೆ ಎಲೆಕ್ಷನ್‌ನಲ್ಲಿ ಧನಂಜಯ್ ಸೌಂಡ್ ಮಾಡ್ತಾರಂತೆ.

ನಟ ಧನಂಜಯ್‌ ಹೆಸರು ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ಲೋಕಸಭಾ ಚುನಾವಣೆ(Loksabha) ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ನಟ ಧನಂಜಯ್(Dhananjaya) ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಧನಂಜಯ್ ಅವರನ್ನ ಕಾಂಗ್ರೆಸ್ ಮುಖಂಡರು ಸಂಪರ್ಕ ಮಾಡಿದ್ದು, ಮೈಸೂರು(Mysore) ಅಥವಾ ಕೊಡಗು (Kodagu)ಲೋಕಸಭೆ ಕ್ಷೇತ್ರಕ್ಕೆ ಧನಂಜಯ್ ಅಭ್ಯರ್ಥಿ ಆಗಬೇಕು ಅಂತ ಕಾಂಗ್ರೇಸ್ ಆಫರ್ ಮಾಡಿದೆ ಅಂತೆಲ್ಲಾ ಸುದ್ದಿಯಾಗಿದೆ. ಡಾಲಿ ಲೋಕಸಭೆ ಎಲೆಕ್ಷನ್ ಮೂಲಕ ರಾಜಕೀಯ ರಂಗ ಪ್ರವೇಶ ಆಗ್ತಾರೆ ಅನ್ನೋ ಸುದ್ದಿಗೆ ಉತ್ತರ ಕೊಟ್ಟಿದ್ದಾರೆ. ನಾನು ಹೈದರಾಬಾದ್‌ನಲ್ಲಿ ಕೆಲಸದಲ್ಲಿ. ಹೋಗಿ ಬರುವಷ್ಟರಲ್ಲಿ ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ನನಗೆ ಟಿಕೆಟ್ ಕೊಡಿಸಿದ್ದಾರೆ. ನಾನು ಸಿನಿಮಾ ಮಾಡ್ತೀನಿ. ಸಿನಿಮಾ ಮಾಡಬೇಕು. ನಟನಾಗಿ ತುಂಬಾ ಕನಸು ಕಟ್ಟಿಕೊಂಡಿದ್ದೇನೆ. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಲೋಚನೆ ಇಲ್ಲ. ನಾನೊಬ್ಬ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿಯೇ ಇರುತ್ತೇನೆ ಎಂದು ಡಾಲಿ ಧನಂಜಯ್ ಮೈಸೂರಿನಲ್ಲಿ ಹೇಳಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪಡೆದಿರುವ ಡಾಲಿ ಧನಂಜಯ್ ಅವರಿಗೆ ಸಾಂಸ್ಕೃತಿಕ ನಗರಿಯಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಡಾಲಿ ಧನಂಜಯ್ ಸಾಮಾಜಿಕ ಕಳಕಳಿ ಹೊಂದಿರುವ ನಟ. ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ಅಭಿಮಾನ ಹೊಂದಿದ್ದಾರೆ. ಡಾಲಿ ಹೇಳಿದ್ದ ‘ಬಡವರ ಮಕ್ಳು ಬೆಳೀಬೇಕು ಕಣ್ರಯ್ಯ’ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

Video Top Stories