ರಕ್ಷಿತ್ ಶೆಟ್ಟಿ ಹೈ ಕ್ವಾಲಿಟಿ ಸಿನಿಮಾಗಳನ್ನು ಕೊಟ್ಟಿದ್ದಾರೆ; ಚಾರ್ಲಿ ನೋಡಿ ತೇಜಸ್ವಿ ಸೂರ್ಯ ಪ್ರತಿಕ್ರಿಯೆ

ಸಂಸದ ತೇಜಸ್ವಿ ಸೂರ್ಯ  777 ಚಾರ್ಲಿ ಸಿನಿಮಾ ನೋಡಿಮೆಚ್ಚಿಕೊಂಡಿದ್ದಾರೆ. ಕುಟುಂಬದ ಜೊತೆ ಚಾರ್ಲಿ ನೋಡಲು ಬಂದಿದ್ದ ತೇಜಸ್ವಿ ಸೂರ್ಯ ಸಿನಿಮಾ ವೀಕ್ಷಿಸಿ ಮಾಧ್ಯಮದ ಜೊತೆ ಮಾತನಾಡಿ, ರಕ್ಷಿತ್ ಶೆಟ್ಟಿಯನ್ನು ಹಾಡಿಹೊಗಳಿದ್ದಾರೆ. 

Share this Video
  • FB
  • Linkdin
  • Whatsapp

777 ಚಾರ್ಲಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ಷಿತ್ ಮತ್ತು ಚಾರ್ಲಿ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪ್ರೇಕ್ಷಕರು ಮತ್ತು ಸಿನಿ ಗಣ್ಯರು ಮಾತ್ರವಲ್ಲದೇ ರಾಜಕೀಯ ಗಣ್ಯರು ಸಿನಿಮಾ ನೋಡಿ ಹಾಡಿಹೊಗಳುತ್ತಿದ್ದಾರೆ. ಇತ್ತೀಚಿಗಷ್ಟೆ ಸಿಎಂ ಬಸವರಾಜ್ ಬೊಮ್ಮಾಯಿ ಸಿನಿಮಾ ನೋಡಿ ಕಣ್ಣೀರಾಕಿದ್ದರು. ತಮ್ಮ ಮನೆಯ ನಾಯಿ ನನೆದು ಭಾವುಕರಾಗಿದ್ದರು. ಇದೀಗ ಸಂಸದ ತೇಜಸ್ವಿ ಸೂರ್ಯ 777 ಚಾರ್ಲಿ ಸಿನಿಮಾ ನೋಡಿಮೆಚ್ಚಿಕೊಂಡಿದ್ದಾರೆ. ಕುಟುಂಬದ ಜೊತೆ ಚಾರ್ಲಿ ನೋಡಲು ಬಂದಿದ್ದ ತೇಜಸ್ವಿ ಸೂರ್ಯ ಸಿನಿಮಾ ವೀಕ್ಷಿಸಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ನಾನು ಮತ್ತು ಕುಟುಂಬದವರಿಗೆ ನಾಯಿ ಎಂದ ತುಂಬಾ ಇಷ್ಟ. ಚಿಕ್ಕವನಾಗಿದ್ದಾಗಿನಿಂದ ನಾಯಿ ಸಾಕುತ್ತಿದ್ದೀನಿ. ಅಮ್ಮ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡದೆ ಅನೇಕ ವರ್ಷಗಳೇ ಆಗಿತ್ತು. ಆದರೀಗ ರಕ್ಷಿತ್ ಮತ್ತು ಕಿರಣ್ ಅಮ್ಮನ್ನು ಚಿತ್ರಮಂದಿರಕ್ಕೆ ಕರೆತಂದಿದ್ದಾರೆ. ಅಮ್ಮನಿಗೂ ಕೂಡ ನಾಯಿ ಎಂದರೇ ತುಂಬಾ ಇಷ್ಟ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video