Asianet Suvarna News Asianet Suvarna News

ಬಹು ನಿರೀಕ್ಷಿತ 'ಮತ್ಸ್ಯಗಂಧ' ಟ್ರೇಲರ್ ಬಿಡುಗಡೆ! ಹೇಗಿದೆ 'ಕ್ಲಾಸ್' ನಾಯಕನ 'ಮಾಸ್' ಅವತಾರ..?

ಕೆಲವೊಂದು ಸಿನಿಮಾಗಳೇ ಹಾಗೆ ಟೈಟಲ್, ಟೀಸರ್‌ನಿಂದಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸುತ್ತವೆ. ಇದೀಗ ದೀಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬರ್ ನಟನೆಯ ಹೊಸ ಸಿನಿಮಾ ಮತ್ಸ್ಯಗಂಧ ಸಿನಿಮಾ ಕೂಡ ಸಿನಿ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.. ಮೀನುಗಾರಿಕೆ ಸಚಿವ ಮಾಂಕಾಳ ಎಸ್ ವೈದ್ಯ ಟ್ರೈಲರ್ ಬಿಡುಗಡೆ ಮಾಡಿದ್ರು.

ಉತ್ತರ ಕನ್ನಡ, ಅಲ್ಲಿನ ಪರಿಸರ, ಸಂಸ್ಕ್ರತಿ ಹಾಗೂ ಬದುಕಿಗೆ ಕೈ ಗನ್ನಡಿ ಹಿಡಿಯುವ ಪ್ರಯತ್ನವೇ ಮತ್ಸ್ಯಗಂಧ ಸಿನಿಮಾ. ಕರಾವಳಿ ಮೀನುಗಾರರ ಭಾಷೆ, ಬದುಕು, ಸಂಪ್ರದಾಯ, ಹೋರಾಟದ ಕಥೆಯ ಮತ್ಸ್ಯಗಂಧದಲ್ಲಿ ಸ್ಯಾಂಡಲ್‌ವುಡ್‌ನ ಲವ್ಲೀ ಹುಡುಗ ಪೃಥ್ವಿ ಅಂಬಾರ್ ಖಾಕಿ ತೊಟ್ಟಿದ್ದು ಅಪರಾಧಿಗಳಿಗೆ ಹಡೆಮುರಿ ಕಟ್ಟಲು ಸಜ್ಜಾಗಿದ್ದಾರೆ. ಮತ್ಸ್ಯಗಂಧದಲ್ಲಿ ದೊಡ್ಡ ತಾರಾಬಳಗ ಇದೆ. ಪೃಥ್ವಿ ಅಂಬಾರ್ ಹಿರಿಯ ನಟ ಶರತ್ ಲೋಹಿತಾಶ್ವ, ಭಜರಂಗಿ ಲೋಕಿ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಮೈಮ್ ರಾಮದಾಸ್ , ದಿಶಾ ಶೆಟ್ಟಿ, ಅಂಜಲಿ ಪಾಂಡೆ, ದಿವ್ಯಾ ಶೆಟ್ಟಿ, ಕಾಂತ್ ರಾಜ್ ಕಡ್ಡಿಪುಡಿ ಹೀಗೆ ಅನೇಕರು ಚಿತ್ರದಲ್ಲಿದ್ದಾರೆ. ಪ್ರಶಾಂತ್ ಸಿದ್ದಿ ಮ್ಯೂಸಿಕ್ ಸಿನಿಮಾಗಿದ್ದು, ಕನ್ನಡ ಪಿಚ್ಚರ್ ಅರ್ಪಿಸುವ ಚಿತ್ರವನ್ನ ಬಿ.ಎಸ್. ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ದೇವರಾಜ್ ಪೂಜಾರಿ ನಿರ್ದೇಶನದ ಮತ್ಸ್ಯಗಂಧ ಸಿನಿಮಾ ಇದೇ ಫೆಬ್ರವರಿ 23ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಇದನ್ನೂ ವೀಕ್ಷಿಸಿ:  ಒಂದು ಸರಳ ಪ್ರೇಮ ಕಥೆಗೆ ವಿದೇಶದಲ್ಲಿ ಭಾರಿ ಬೇಡಿಕೆ..ವಿನಯ್ ಚಿತ್ರ ನೋಡಿ ಖುಷಿ ಪಟ್ಟ ಕನ್ನಡ ತಾರೆಯರು!

Video Top Stories