Today Horoscope: ಇಂದು ಮಹಾಲಯ ಅಮಾವಾಸ್ಯೆ ಇದ್ದು, ಪಿತೃಗಳ ಸ್ಮರಣೆಯಿಂದ ಏನೆಲ್ಲಾ ಫಲ ಸಿಗಲಿದೆ ಗೊತ್ತಾ..?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶನಿವಾರ, ಅಮಾವಾಸ್ಯೆ ತಿಥಿ, ಹಸ್ತ ನಕ್ಷತ್ರ.

ಇಂದು ಮಹಾಲಯ ಅಮಾವಾಸ್ಯೆ ಇದ್ದು, ಈ ದಿನ ನಮ್ಮನ್ನು ಅಗಲಿದ ಪೂರ್ವಜರಿಗೆ ಶ್ರಾದ್ಧವನ್ನು ಮಾಡಿ. ಈ ವರ್ಷ ಶನಿವಾರ ಮಹಾಲಯ ಅಮಾವಾಸ್ಯೆ ಬಂದಿದ್ದು, ಪಿತೃ ತರ್ಪಣವು ನಿಮ್ಮ ಮನೆಯಲ್ಲಿ ಶನಿದೇವ ಮತ್ತು ಪೂರ್ವಜರ ಆಶೀರ್ವಾದಕ್ಕೆ ಕಾರಣವಾಗುತ್ತದೆ. ಮರಣ ಹೊಂದಿರುವ ಪೂರ್ವಜರು ಇಂದು ನಿಮ್ಮನ್ನು ನೋಡಲು ಬರುತ್ತಾರೆ ಎಂಬುದು ನಂಬಿಕೆಯಾಗಿದೆ.

ಇದನ್ನೂ ವೀಕ್ಷಿಸಿ: ತನ್ನ ಕೆಣಕಿದವರ ಜಾಗ ಖಾಲಿ ಮಾಡಿಸಿದ ಇಸ್ರೇಲ್‌, ಗಾಜಾ ಪ್ರಜೆಗಳಿಗೆ ಊರುಬಿಡಲು ಐಡಿಎಫ್‌ ಆರ್ಡರ್‌!

Related Video