ಕನಸುಗಾರನ ಮನೆಯ ಮದುವೆ ಸಂಭ್ರಮದಲ್ಲಿ ಕನ್ನಡ ಕಲಾವಿದರ ರಂಗು

ನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ. ತನ್ನ ಹಿರಿಯ ಪುತ್ರ ಮನೊರಂಜನ್ ರವಿಚಂದ್ರನ್ಗೆ ದಾಂಪತ್ಯದ ದಾರಿ ತೋರಿಸಿದ್ದಾರೆ.

First Published Aug 22, 2022, 4:18 PM IST | Last Updated Aug 22, 2022, 4:18 PM IST

ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ. ತನ್ನ ಒಬ್ಬೊಬ್ಬರೇ ಮಕ್ಕಳನ್ನ ಹೊಸ ಬಾಳಿಗೆ ಬೀಳ್ಕೊಡುತ್ತಿರೋ ರವಿಮಾಮ, ಮೂರು ವರ್ಷದ ಹಿಂದೆ ಮುದ್ದಿನ ಮಗಳ ಮದುವೆ ಮಾಡಿದ್ರು. ಈಗ ಸ್ಯಾಂಡಲ್ವುಡ್ ಶೋ ಮ್ಯಾನ್, ತನ್ನ ಹಿರಿಯ ಪುತ್ರ ಮನೊರಂಜನ್ ರವಿಚಂದ್ರನ್ಗೆ ದಾಂಪತ್ಯದ ದಾರಿ ತೋರಿಸಿದ್ದಾರೆ. ರವಿಚಂದ್ರನ್ ಅಂದ್ರೆ ಪ್ರೇಮಿಗಳಿಗೆ ಹಬ್ಬ. ಆದ್ರೆ ರವಿಚಂದ್ರನ್ ಮಕ್ಕಳು ಮಾತ್ರ ಯಾವ ಪ್ರೇಮದಲ್ಲೂ ಬೀಳದೇ ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ. ಸ್ಯಾಂಡಲ್ವುಡ್ ಸಾಹೇಬ ಮನೋರಂಜನ್ ರವಿಚಂದ್ರನ್ರದ್ದು ಕೂಡ ಅರೇಂಜ್ ಮ್ಯಾರೇಜ್. ಸಂಗೀತ ಅವರನ್ನು ಮನು ವರಿಸಿದ್ದಾರೆ. ಇವರಿಬ್ಬರ ಮದುವೆಯ ಮೆಹಂದಿ ಮತ್ತು ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಇಡೀ ಕ್ರೇಜಿ ಕುಟುಂಬ ಮನೆ ಮಗನ ಮದುವೆಯ ಮೆಹೆಂದಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕ್ರೇಜಿಸ್ಟಾರ್ ಪುತ್ರನ ಮದುವೆ ಮೂರು ದಿನ ನಡೆಯುತ್ತಿದೆ. ಮೊದಲ ದಿನ ಮೆಹೆಂದಿ ಹಾಗು ರಿಸಪ್ಷೆನ್ ನಡೆದಿದೆ. ಆರತಕ್ಷತೆಯಲ್ಲಿ ರವಿಚಂದ್ರನ್ ಆತ್ಮೀಯ ಸ್ನೇಹಿತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಹಂಸಲೇಕ ದಂಪತಿ, ಮಾಸ್ಟರ್ ಆನಂದ್, ಬಹುಭಾಷಾ ನಟಿ ಖುಷ್ಬು ಸೇರಿದಂತೆ ರಾಜಕೀಯ ಗಣ್ಯರು ಭಾಗಿ ಆಗಿ ನವ ದಂಪತಿಗಳಿಗೆ ಆಶೀರ್ವಾದಮಾಡಿದ್ರು.