Asianet Suvarna News Asianet Suvarna News

ಮಹೇಶ್ ಬಾಬು 28 ಸಿನಿಮಾ ಗ್ಲಿಂಪ್ಸ್ ರಿಲೀಸ್: ತೆರೆ ಮೇಲೆ ಸ್ಟಾರ್ ಡೈರೆಕ್ಟರ್, ಸ್ಟಾರ್ ಹೀರೋ ಮ್ಯಾಜಿಕ್!

ಗುಂಟೂರು ಖಾರಂ ಸಿನಿಮಾಗೆ ತೆಲುಗು ಸ್ಟಾರ್ ಡೈರೆಕ್ಟರ್ ತ್ರಿವಿಕ್ರಂ ಶ್ರೀನಿವಾಸ್ ಆಕ್ಷನ್ ಕಟ್ ಹೇಳೋ ಜವಬ್ಧಾರಿ ಹೊತ್ತಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಈಗ ಸೌತ್‌ನ ಹಾಟ್ ಟಾಪಿಕ್ ಆಗಿದ್ದಾರೆ. ಅದಕ್ಕೆ ಕಾರಣ ಪ್ರಿನ್ಸ್ 28 ಸಿನಿಮಾ. ತೆಲುಗಿನ ಮೇರು ನಟ ಸೂಪರ್ ಸ್ಟಾರ್ ಕೃಷ್ಣ ಜನ್ಮದಿನದ ಅಂಗವಾಗಿ ಮಹೇಶ್ ಬಾಬು ನಟಿಸುತ್ತಿರುವ 28ನೇ ಸಿನಿಮಾದ ವಿಶೇಷ ಗ್ಲಿಂಪ್ಸ್ ವಿಡಿಯೋ ರಿಲೀಸ್ ಆಗಿದೆ. ಅಷ್ಟೇ ಅಲ್ಲ ಸಿನಿಮಾದ ಟೈಟಲ್ ಕೂಡ ರಿವೀಲ್ ಮಾಡಿದ್ದಾರೆ. ರಗಡ್ ಲುಕ್‌ನಲ್ಲಿ ಟಾಲಿವುಡ್ ಪ್ರಿನ್ಸ್ ದರ್ಬಾರ್ ಮಾಡುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಶುರುವಾಗಿದ್ದ ಮಹೇಶ್ ಬಾಬು 28 ಸಿನಿಮಾಗೆ ಟೈಟಲ್ ಫಿಕ್ಸ್ ಆಗಿರಲಿಲ್ಲ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'SSMB 28' ಎಂದು ನಾಮಕರಣ ಮಾಡಿದ್ರು. ಈಗ ಪ್ರಿನ್ಸ್ 28 ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಗುಂಟೂರು ಖಾರಂ ಎಂದು ಶೀರ್ಷಿಕೆ ಇಟ್ಟಿದ್ದಾರೆ. ಈ ಟೈಟಲ್ ಗ್ಲಿಮ್ಸ್ನಲ್ಲಿ ಮಹೇಶ್ ಬಾಬು ಆಕ್ಷನ್ ಧಮಾಕ ಇದೆ. ಗುಂಟೂರು ಮೆಣಸಿನಷ್ಟೇ ಖಾರದ ಡೈಲಾಗ್ ಹೊಡೆದಿದ್ದಾರೆ.

ಇದನ್ನೂ ವೀಕ್ಷಿಸಿ: Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೀಗಿದೆ.. ಇಂದು ಶ್ರೀಪಾದರಾಜರ ಆರಾಧನೆ ಮಾಡಿ