ಇಂದು ಥಿಯೇಟರ್‌ನಲ್ಲಿ ಕ್ಷೇತ್ರಪತಿ ಆರ್ಭಟ: ಉತ್ತರ ಕರ್ನಾಟಕದ ಸೊಗಡು, ಸಂಸ್ಕೃತಿಯ ಪ್ರತಿಬಿಂಬ ಈ ಸಿನಿಮಾ !

ಉತ್ತರ ಕರ್ನಾಟಕ ಭಾಷೆ ಸೊಗಡಿನ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಬಂದಿದ್ದು ಕಡಿಮೆ. ಆದರೆ  ಕ್ಷೇತ್ರಪತಿ ಸಂಪೂರ್ಣ ಉತ್ತರ ಕರ್ನಾಟಕ ಸಿನಿಮಾ ಎನ್ನಬಹುದು. ನಾಗಮಂಡಲ, ಹುಲಿಯ ನಂತರ ಕ್ಷೇತ್ರಪತಿ ಆ ನಿಟ್ಟಿನಲ್ಲಿ ನೋಡಲೇಬೇಕಾದ ಸಿನಿಮಾವಾಗಿದೆ.

Share this Video
  • FB
  • Linkdin
  • Whatsapp

ಈ ಸಿನಿಮಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಾಗಿ ಸರ್ಜಾರದ ವಿರುದ್ಧ ರೊಚ್ಚಿಗೇಳೋ ಯುವಕನ ಪಾತ್ರದಲ್ಲಿ ನವೀನ್ ಶಂಕರ್ (Naveen Shankar) ಮಿಂಚಿದ್ದಾರೆ. ಸರ್ಕಾರಕ್ಕೆ ಹೊಡೀರೋ ಗೋಲಿ ಎನ್ನುವ ಡೈಲಾಗ್ ವೈರಲ್ ಆಗಿದ್ದು, ಚಿತ್ರದಲ್ಲಿ ಮೇಕಪ್ ಇಲ್ಲದೆ ಸಹಜವಾದ ನಟನೆ ಮತ್ತು ಆಕ್ಷನ್ ದೃಶ್ಯಗಳಿಂದ, ಡೈಲಾಗ್ಸ್ ನಿಂದ ಸಿನಿಮಾ ಗಮನಸೆಳೆಯುತ್ತಿದೆ. ಕ್ಷೇತ್ರಪತಿಯಲ್ಲಿ(Kshetrapati) ನವೀನ್ ಜೊತೆ ಕೆಜಿಎಫ್ ಅರ್ಚನಾ ಜೋಯಿಸ್ ಜೋಡಿಯಾಗಿದ್ದಾರೆ. ಈ ಸಿನಿಮಾದ ಒಂದು ಹಾಡು ಬಿಡುಗಡೆಯಾಗಿದ್ದು, ಇಬ್ಬರೂ ತೆರೆಯ ಹಿಂದೆಯೂ ಹಾಡನ್ನು ಸೊಗಸಾಗಿ ಹಾಡಿದ್ದಾರೆ. ಕ್ಷೇತ್ರಪತಿ ರೈತರ ಆತ್ಮಹತ್ಯೆ ಕುರಿತಾದ ಸೀರಿಯಸ್ ವಿಷಯವೊಳಗೊಂಡ ಸಿನಿಮಾವಾಗಿದೆ. ಸಿನಿಮಾದ ನಿರ್ದೇಸಕ ಶ್ರೀಕಾಂತ್ ಕಟಗಿ ಕೂಡ ಉತ್ತರ ಕರ್ನಾಟಕದವರೇ(North Karnataka) ಆದ್ದರಿಂದ ಜನರ ನಾಡಿಮಿಡಿತವನ್ನು ಬಲ್ಲವರಾಗಿದ್ದು, ಉತ್ತರ ಕರ್ನಾಟಕ ಖಡಕ್ ರೊಟ್ಟಿಯಂತೆಯೇ ಖಡಕ್ ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Panchanga: ಸಂಪತ್ತು ವೃದ್ಧಿಗೆ ಶ್ರಾವಣ ಶುಕ್ರವಾರದಂದು ಈ ರೀತಿ ಮಹಾಲಕ್ಷ್ಮೀ ಆರಾಧನೆ ಮಾಡಿ..

Related Video