ಗೋಲ್ಡನ್ ಸ್ಟಾರ್ ಈ ಬಾರಿ ಗುರಿ ತಪ್ಪಲ್ಲ! ಕೃಷ್ಣಂ ಪ್ರಣಯ ಸಖಿ ಸಖತ್ ಸಾಂಗ್ ಕೇಳಿದ್ರಾ ?

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ  ಗೋಲ್ಡನ್ ಸ್ಟಾರ್ ಹಾಡುಗಳದ್ದೆ ಸಡಗರ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಮತ್ತೊಂದು ಹಾಡು ಯುವ ಹೃದಯಗಳಲ್ಲಿ ಹಾಡುತ್ತಿದೆ ಸುವ್ವಿ ಸುವ್ವಾಲಿ.

Bindushree N  | Published: Jul 21, 2024, 10:40 AM IST

ಗೋಲ್ಡನ್ ಸ್ಟಾರ್' ಗಣೇಶ್ ಅವರ ಮುಂದಿನ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'(Krishnam Pranaya Sakhi) ಬಿಡುಗಡೆಗೆ ಸಜ್ಜಾಗಿದೆ. ಇದೇ ಆಗಸ್ಟ್ 15ರಂದು ಗ್ರ್ಯಾಂಡ್ ಆಗಿ ಈ ಸಿನಿಮಾವನ್ನು ತೆರೆಕಾಣಿಸಲು ಚಿತ್ರತಂಡ ಸಜ್ಜಾಗಿದೆ. ಗಣೇಶ್(Ganesh) ಅವರ ವೃತ್ತಿ ಬದುಕಿನಲ್ಲೇ 'ಕೃಷ್ಣಂ ಪ್ರಣಯ ಸಖಿ' ದೊಡ್ಡ ಬಜೆಟ್‌ನ ಸಿನಿಮಾವಂತೆ. ಈಚೆಗೆ 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದ ನಟಿ ಮಾಳವಿಕಾ ನಾಯರ್ ಅವರು 'ಕೃಷ್ಣಂ ಪ್ರಣಯ ಸಖಿ' ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೀ ಮಾಳವಿಕಾ ಜೋಡಿ ನೋಡಿ ಮುಂಗಾರು ಮಳೆ ನೋಡಿದಷ್ಟೆ ಖುಷಿಯಾಗುವಂತಿದೆ. ಅದಕ್ಕೆ ಈಗ ಬಿಡುಗಡೆಯಾಗಿರೋ ಈ ಹಾಡೇ ಸಾಕ್ಷಿ. ಕೃಷ್ಣಂ ಪ್ರಣಯ ಸಖಿ ಚಿತ್ರದ "ದ್ವಾಪರ" ಹಾಡಿನ(Dwapara song) ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರು ರಿಪೀಟ್ ಮೂಡ್‌ನಲ್ಲಿ ಕೇಳುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ ಕವಿರಾಜ್ ಬರೆದಿದ್ದ ಚಿನ್ನಮ್ಮಾ ಸಾಂಗ್ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿತ್ತು. ಈಗ ದ್ವಾಪರ ಈ ಹಾಡನ್ನು ನೋಡಿದವರ ಹೃದಯ ದಿಲ್ ರಂಗೀಲ ಎಂದು ಕುಣಿಯುತ್ತಿದೆ. 

ಇದನ್ನೂ ವೀಕ್ಷಿಸಿ:  ಕಂಠೀರವ ಸ್ಟುಡಿಯೋದಲ್ಲಿ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಪ್ರೀ ಕ್ಲೈಮ್ಯಾಕ್ಸ್ ಶೂಟಿಂಗ್..!

Read More...