ಕಂಠೀರವ ಸ್ಟುಡಿಯೋದಲ್ಲಿ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಪ್ರೀ ಕ್ಲೈಮ್ಯಾಕ್ಸ್ ಶೂಟಿಂಗ್..!

ಇದೀಗ ಒನ್ಸ್ ಅಗೈ ಸಂಜು ವೆಡ್ಸ್ ಗೀತಾ ಬಂದಿದ್ದಾರೆ. ಆದ್ರೆ ಈ ಭಾರಿ ಸಂಜು ಶ್ರೀನಗರ ಕಿಟ್ಟಿಯಾದ್ರೆ ಗೀತಾ ಆಗಿ ರಚಿತಾ ರಾಮ್ ಬಂದಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ ಪ್ರೀ ಕ್ಲೈಮ್ಯಾಕ್ಸ್ ಶೂಟಿಂಗ್ ನಡೀತಿದೆ. 

First Published Jul 21, 2024, 10:22 AM IST | Last Updated Jul 21, 2024, 10:22 AM IST

ನಿರ್ದೇಶಕ ನಾಗಶೇಖರ್ ಸಾರಥ್ಯದ "ಸಂಜು ವೆಡ್ಸ್ ಗೀತಾ-2"(Sanju Weds Geetha 2) ಪ್ರಾರಂಭದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಂಜು ಹಾಗೂ ಗೀತಾಳ ನೋವು ನಲಿವಿನ ಪ್ರೇಮಕಥೆಯನ್ನ ರೇಷ್ಮೆ ಬೆಳೆಯುವ ರೈತರ(Farmers) ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರ್ದೇಶಕ ನಾಗಶೇಖರ್(Director Nagashekhar) ಹೇಳ ಹೊರಟಿದ್ದಾರೆ. ಈ ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ದೃಶ್ಯದ(Pre Climax shooting) ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ(Kanteerava Studio) ನಡೀತಿದೆ. ಅಲ್ಲಿ ನಾಯಕ ಶ್ರೀನಗರ ಕಿಟ್ಟಿ ಒಬ್ಬ ಸೈನಿಕನ ಗೆಟಪ್ ನಲ್ಲಿ ಕುದುರೆ ಏರಿ ಬಂದಿದ್ದಾರೆ. ಆಕ್ಷನ್ ಮೂಡ್ನಲ್ಲಿ ಶ್ರೀನಗರ ಕಿಟ್ಟಿ( Srinagar Kitti) ಜರ್ಮನ್ ಸೈನಿಕರ ವಿರುದ್ದ ವಾರ್ ಮಾಡಿದ್ದಾರೆ. ಈ ಸೆಣೆಸಾಟದ ಸನ್ನಿವೇಶವನ್ನ ಗ್ರೀನ್ ಮ್ಯಾಟ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯ ಸಂಜುವೆಡ್ಡ್ ಗೀತಾ. ಈಗಾಗಲೇ ಸಕ್ಸಸ್ಫುಲ್ ನಿರ್ದೇಶಕ ಅಂತಾ ಕರೆಸಿಕೊಂಡಿರುವ ನಾಗಶೇಖರ್ ಚಿತ್ರದ ಕ್ಲೈಮಾಕ್ಸ್ ಆ್ಯಕ್ಷನ್ ಸಿಕ್ವೇನ್ಸ್ ಚಿತ್ರೀಕರಣದಲ್ಲಿ 50 ಫೈಟರ್ಗಳ ಜೊತೆ ಶ್ರೀನಗರ ಕಿಟ್ಟಿಯನ್ನ ಫೈಟ್ ಮಾಡಲು ಬಿಟ್ಟಿದ್ದಾರೆ. ಈ ದೃಶ್ಯಗಳಿಗೆ ಸ್ಟಂಟ್ ಮಾಸ್ಟರ್ ಡಿಫ್ರೆಂಟ್ ಡ್ಯಾನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಧ್ಯ ಶೇಕಡ 90ರಷ್ಟು ಸಿನಿಮಾ ಶೂಟಿಂಗ್ ಮುಗಿದಿದೆ. ಸಂಜು ವೆಡ್ಸ್ ಗೀತಾ ಪಾರ್ಟ್ ಒನ್ ಸಿನಿಮಾ ಬಂದಾಗ ಆ ಸಿನಿಮಾ ಮುಹೂರ್ತದಲ್ಲಿ ಒಂದು ಗಿಡ ನೆಡೋ ಮೂಲಕ ಶೂಟಿಂಗ್ ಶುರು ಮಾಡಿದ್ರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಗಿಡ ನೆಡೋ ಮೂಲಕ ಸಂಜು ವೆಡ್ಸ್ ಗೀತಾ ಪಾರ್ಟ್2 ಶೂಟಿಂಗ್ ಮುಗಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಅಂದು ಆರೋಪಿ ಅನುಕುಮಾರ್ ತಂದೆ ಸಾವು..! ಈಗ ದರ್ಶನ್ ಗ್ಯಾಂಗ್ 4ನೇ ಆರೋಪಿ ತಾಯಿ ನಿಧನ!

Video Top Stories