ಕಿಚ್ಚ ಸುದೀಪ್ ಅಭಿಮಾನಿಗಳಿಗೆ BIG News! ಯುಗಾದಿ ಹಬ್ಬಕ್ಕೆ ನಿಜವಾದ ಹೋಳಿಗೆ ಎಂದ ಫ್ಯಾನ್ಸ್!

ಕಿಚ್ಚ ಸುದೀಪ್ (Kiccha Sudeep) ಅಭಿನಯದ 'ವಿಕ್ರಾಂತ್ ರೋಣ’(Vikranth Rona)ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.  ಅಭಿಮಾನಿಗಳು ಚಿತ್ರತಂಡದಿಂದ ಅಪ್‌ಡೇಟ್‌ಗಾಗಿ ಕಾದಿದ್ದರು. ಇದೀಗ ಚಿತ್ರತಂಡ ಹೊಸ ಸುದ್ದಿ ನೀಡಿದೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ (Kiccha Sudeep) ಅಭಿನಯದ 'ವಿಕ್ರಾಂತ್ ರೋಣ’(Vikranth Rona)ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಅಭಿಮಾನಿಗಳು ಚಿತ್ರತಂಡದಿಂದ ಅಪ್‌ಡೇಟ್‌ಗಾಗಿ ಕಾದಿದ್ದರು. ಇದೀಗ ಚಿತ್ರತಂಡ ಹೊಸ ಸುದ್ದಿ ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರು ದಿನಕ್ಕೆ 500 ಕೋಟಿ ಬಾಚಿತಾ RRR?ರೆಕಾರ್ಡ್ ಬ್ರೇಕ್ ಮಾಡುತ್ತಾರಾ ರಾಜಮೌಳಿ?

ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ಟ್ವೀಟ್ ಮಾಡಿ, ಯುಗಾದಿಗೆ ಸಂಭ್ರಮಿಸಲು ಅಭಿಮಾನಿಗಳಿಗೆ ಮತ್ತೊಂದು ಕಾರಣ ನೀಡಿದ್ದಾರೆ. ‘ಏಪ್ರಿಲ್ 2ರಂದು ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣದ ರಿಲೀಸ್ ಟೀಸರ್ ಬಿಡುಗಡೆ ಮಾಡುತ್ತೇವೆ’ ಎಂದು ಅನೂಪ್ ಟ್ವೀಟ್ ಮೂಲಕ ಘೋಷಿಸಿದ್ದಾರೆ.

ವಿಕ್ರಾಂತ್ ರೋಣ (Vikranth Rona)ಇಂಗ್ಲೀಷ್‌ನಲ್ಲೂ ತೆರೆಗೆ ಬರುತ್ತಿದೆ. ವಿಶೇಷವೆಂದರೆ ಇಂಗ್ಲೀಷ್‌ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ (Sudeep)ಅವರೇ ಧ್ವನಿ ನೀಡಿದ್ದಾರೆ. ‘ಕನ್ನಡದ ಸೂಪರ್ ಸ್ಟಾರ್ ಒಬ್ಬರು ತಮ್ಮ ಇಂಗ್ಲೀಷ್ ಚಿತ್ರಕ್ಕೆ ತಮ್ಮದೇ ಧ್ವನಿ ನೀಡುತ್ತಿರೋದು ಇದೇ ಮೊದಲ ಬಾರಿ. ಅಷ್ಟೇ ಅಲ್ಲ, ಭಾರತ ಮಟ್ಟದಲ್ಲೂ ಇಂತಹ ನಾಯಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ’ ಎಂದು ಈ ಹಿಂದೆ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದರು ಅನೂಪ್ ಭಂಡಾರಿ. ಮಲಯಾಳಂ ಬಿಟ್ಟು ಉಳಿದ ಎಲ್ಲಾ ಭಾಷೆಗಳಲ್ಲೂ ಸ್ವತಃ ಸುದೀಪ್ ಧ್ವನಿ ನೀಡಿದ್ದಾರೆ ಎಂದು ಹೇಳಲಾಗಿದೆ.

ವಿಕ್ರಾಂತ್ ರೋಣ’ (Vikrant Rona) ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸುತ್ತಿರುವ ಚಿತ್ರ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್‌ಗಳು ನಿರೀಕ್ಷೆಯನ್ನು ಹೆಚ್ಚಿಸಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿಯಲ್ಲಿ ಚಿತ್ರ ತೆರೆಕಾಣಬೇಕಿತ್ತು. ಆದರೆ ಹಲವು ಅನಿವಾರ್ಯ ಕಾರಣದಿಂದ ರಿಲೀಸ್ ಮುಂದೂಡಲಾಗಿದೆ. ಏಪ್ರಿಲ್ ಕೊನೆಯ ವಾರ ತೆರೆಕಾಣುವ ನಿರೀಕ್ಷೆ ಇದೆ..

Related Video