ಮೂರು ದಿನಕ್ಕೆ 500 ಕೋಟಿ ಬಾಚಿತಾ RRR? ರೆಕಾರ್ಡ್ ಬ್ರೇಕ್ ಮಾಡುತ್ತಾರಾ ರಾಜಮೌಳಿ?

ರಾಜಮೌಳಿ ನಿರ್ದೇಶನದ, ಮೋಸ್ಟ್ ಎಕ್ಸೈಟೆಡ್ ಸಿನಿಮಾ RRR ರಿಲೀಸ್ ಆದ ಮೊದಲ ದಿನವೇ 200 ಕೋಟಿ ಗಳಿಸಿದೆ ಎನ್ನಲಾಗಿತ್ತು. ಇದೀಗ ಮೂರೇ ದಿನದಲ್ಲಿ 500 ಕೋಟಿ ಗಳಿಸಿದೆ ಎನ್ನಲಾಗಿದೆ. ಅಷ್ಟೆ ಅಲ್ಲದೆ ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ರಿಲೀಸ್ ಆಗಿದೆ.  

Share this Video
  • FB
  • Linkdin
  • Whatsapp

ರಾಜಮೌಳಿ ನಿರ್ದೇಶನದ, ಮೋಸ್ಟ್ ಎಕ್ಸೈಟೆಡ್ ಸಿನಿಮಾ RRR ರಿಲೀಸ್ ಆದ ಮೊದಲ ದಿನವೇ 200 ಕೋಟಿ ಗಳಿಸಿದೆ ಎನ್ನಲಾಗಿತ್ತು. ಇದೀಗ ಮೂರೇ ದಿನದಲ್ಲಿ 500 ಕೋಟಿ ಗಳಿಸಿದೆ ಎನ್ನಲಾಗಿದೆ. ಅಷ್ಟೆ ಅಲ್ಲದೆ ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ರಿಲೀಸ್ ಆಗಿದೆ. ವೀಕೆಂಡ್ ನಲ್ಲಿ ವಿದೇಶದಲ್ಲೂ ಸಖತ್ ಕಮಾಯಿ ಮಾಡಿದೆಯಂತೆ. ಇದೇ ವೇಗದಲ್ಲೇ ಒಂದು ವಾರ ಪ್ರದರ್ಶನ ಕಂಡರೆ, ಒಂದು ವಾರದಲ್ಲಿ ಸಾವಿರ ಕೋಟಿ ಹಣ ಗಳಿಸಿದ ಮೊದಲ ಚಿತ್ರ ಇದಾಗಲಿದೆ. 

Rashmika Mandanna ಆ ಒಂದೇ ವೀಡಿಯೋಗೆ ಲಕ್ಷ ಲಕ್ಷ ವೀಕ್ಷಣೆ!

ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ, ಉತ್ತರ ಭಾರತದಲ್ಲಿ 25 ಕೋಟಿ, ಹೀಗೆ ಭಾರತದಲ್ಲೇ ಮೊದಲ ದಿನ ಆರ್.ಆರ್.ಆರ್ ಗಳಿಸಿದ ಒಟ್ಟು ಮೊತ್ತ 156 ಕೋಟಿ ಆಗಿತ್ತು. ವಿದೇಶದಲ್ಲೂ ಕೂಡ ಹಿಂದೆ ಬಿದ್ದಿರಲಿಲ್ಲ. ಯುಎಸ್ ನಲ್ಲೇ 42 ಕೋಟಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ದೇಶಗಳಿಂದ 25 ಕೋಟಿ ಬಂದಿತ್ತು. ವಿಶ್ವದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ 223 ಕೋಟಿ ಆಗಿತ್ತು. ಹಿಂದಿ ವರ್ಷನ್ ಒಂದರಲ್ಲೇ ಶುಕ್ರವಾರ 19 ಕೋಟಿ, ಶನಿವಾರ 24 ಕೋಟಿ ಹಾಗೂ ಭಾನುವಾರ 31.50 ಕೋಟಿ ಏರಿಕೆ ಕಂಡಿದೆ. 

Related Video