ಕೆರೆಬಿಯನ್‌ ಹುಡುಗರ ಮೈಯಲ್ಲೂ ರಾರಾ ರಕ್ಕಮ್ಮ! ವಿಡಿಯೋ ವೈರಲ್

ರಾ.. ರಾ.. ರಕ್ಕಮ್ಮ. ಈಗ ಎಲ್ಲೆಲ್ಲೂ ರಕ್ಕಮ್ಮನದ್ದೇ ಟ್ರೆಂಡಮ್ಮಾ. ಎಂಟು ದಿಕ್ಕಿನಲ್ಲೂ ರಾರಾ ರಕ್ಕಮ್ಮನದ್ದೇ ಘಮಲಮ್ಮ. ಸಾಮಾಜಿಕ ಜಾಲತಾಣದಲ್ಲಂತೂ ವಿಕ್ರಾಂತ್ ರೋಣನ ರಕ್ಕಮ್ಮನದ್ದೇ ಹವಾ. ಹೌದು! ರಕ್ಕಮ್ಮ ಹಾಡು ಬಿಡುಗಡೆಯಾಗುತ್ತಿದ್ದಂತೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಮಾಡಿದ ಎಕ್ಕ ಸಕ್ಕ ಸ್ಟೆಪ್ ಸಿಕ್ಕಾಪಟ್ಟೆ ಕಿಕ್ಕೇರಿಸಿತ್ತು.
 

Share this Video
  • FB
  • Linkdin
  • Whatsapp

ರಾ.. ರಾ.. ರಕ್ಕಮ್ಮ. ಈಗ ಎಲ್ಲೆಲ್ಲೂ ರಕ್ಕಮ್ಮನದ್ದೇ ಟ್ರೆಂಡಮ್ಮಾ. ಎಂಟು ದಿಕ್ಕಿನಲ್ಲೂ ರಾರಾ ರಕ್ಕಮ್ಮನದ್ದೇ ಘಮಲಮ್ಮ. ಸಾಮಾಜಿಕ ಜಾಲತಾಣದಲ್ಲಂತೂ ವಿಕ್ರಾಂತ್ ರೋಣನ ರಕ್ಕಮ್ಮನದ್ದೇ ಹವಾ. ಹೌದು! ರಕ್ಕಮ್ಮ ಹಾಡು ಬಿಡುಗಡೆಯಾಗುತ್ತಿದ್ದಂತೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಮಾಡಿದ ಎಕ್ಕ ಸಕ್ಕ ಸ್ಟೆಪ್ ಸಿಕ್ಕಾಪಟ್ಟೆ ಕಿಕ್ಕೇರಿಸಿತ್ತು. ಈ ಸೌಂಡಿಗೆ ರೀಲ್ಸ್ ರಾಜ-ರಾಣಿಯರು ಹುಚ್ಚೆದು ಕುಣಿದಿದ್ದು ಟ್ರೆಂಡ್ ಆಗಿಬಿಡ್ತು. ಈಗ ಇದೇ ರಾರಾ ರಕ್ಕಮ್ಮ ಟಾಮ್ ಅಂಡ್ ಜೆರ್ರಿಯ ಮೈಮೇಲೂ ಬಂದಿದ್ದಾಳೆ. ತುಂಬಾ ಕ್ಯೂಟ್ ಆಗಿ ಟಾಮ್ ಅಂಡ್ ಜೆರ್ರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಟ್ರೆಂಡ್ ಆಗಿರುವ ರಕ್ಕಮ್ಮ ಕೆರೆಬಿಯನ್‌ ಹುಡುಗರ ಮೈಮೇಲೆ ಬಂದಿದ್ದಾಳೆ. ಕೆರಿಬಿಯನ್ ಹುಡುಗರು ಮೀನು ತಿನ್ನುತ್ತಾ ಡ್ಯಾನ್ಸ್ ಮಾಡುವ ವಿಡಿಯೋಗೆ ರಕ್ಕಮ್ಮನ ಹಾಡು ಮಿಕ್ಸ್‌ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಹೆಚ್ಚಿನ ಮನಂರಂಜನೆಗೆ ಈ ವಿಡಿಯೋವನ್ನು ವೀಕ್ಷಿಸಿ.

Add Asianetnews Kannada as a Preferred SourcegooglePreferred

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video