ಗೀತಾ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಕಿಚ್ಚ! ವಿಡಿಯೋ ವೈರಲ್

ದೊಡ್ಮನೆ ಅಂದ್ರೆ ಮೊದ್ಲಿಗೆ ನೆನಪಾಗೋದು ಡಾ. ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್ ಕುಮಾರ್. ಪಾರ್ವತಮ್ಮ ರಾಜ್ ಕುಮಾರ್ ಕಾಲಾನಂತರ ಆ ಜಾಗ ಭರ್ತಿ ಮಾಡೋ ಶಕ್ತಿ ಇದ್ರೆ ಅದು ಡಾ. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್‌ಗೆ ಮಾತ್ರ. ಇದು ನಿಜ ಕೂಡ. ಗೀತಾ ಶಿವರಾಜ್ ಕುಮಾರ್‌ರನ್ನು ಯಾರೇ ನೋಡಿದ್ರು ಪ್ರೀತಿಯಿಂದ ಗೌರವಿಸ್ತಾರೆ. 

Share this Video
  • FB
  • Linkdin
  • Whatsapp

ದೊಡ್ಮನೆ ಅಂದ್ರೆ ಮೊದ್ಲಿಗೆ ನೆನಪಾಗೋದು ಡಾ. ರಾಜ್ ಕುಮಾರ್ (Rajkumar) ಹಾಗು ಪಾರ್ವತಮ್ಮ ರಾಜ್ ಕುಮಾರ್. ಪಾರ್ವತಮ್ಮ ರಾಜ್ ಕುಮಾರ್ ಕಾಲಾನಂತರ ಆ ಜಾಗ ಭರ್ತಿ ಮಾಡೋ ಶಕ್ತಿ ಇದ್ರೆ ಅದು ಡಾ. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್‌ಗೆ (Geetha Shivarajkumar) ಮಾತ್ರ. ಇದು ನಿಜ ಕೂಡ. ಗೀತಾ ಶಿವರಾಜ್ ಕುಮಾರ್‌ರನ್ನು ಯಾರೇ ನೋಡಿದ್ರು ಪ್ರೀತಿಯಿಂದ ಗೌರವಿಸ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೀತಾ ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಕಿಚ್ಚ! ವಿಡಿಯೋ ವೈರಲ್

ಇದೀಗ ಶಿವರಾಜ್ಕುಮಾರ್ ಅಪ್ಪಟ ಸ್ನೇಹಿತ ಅಭಿಮಾನಿ ಆಗಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಗೀತ ಶಿವರಾಜ್ ಕುಮಾರ್‌ರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಗೀತ ಶಿವರಾಜ್ ಕುಮಾರ್ ಸಿಕ್ಕಾಗೆಲ್ಲಾ ತನ್ನ ಸ್ವಂತ ಅಕ್ಕನ ಹಾಗೆ ಪ್ರೀತಿಯಿಂದ ಸಂತೈಸೋ ಕಿಚ್ಚ, ಈ ಹಿಂದೆ ಕಾರ್ಯಕ್ರಮ ಒಂದರಲ್ಲಿ ಗೀತಕ್ಕನ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಈಗ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಮಹೂರ್ಥಕ್ಕೆ ಬಂದಿದ್ದ ಕಿಚ್ಚ ಗೀತಕ್ಕನಿಗೆ ನಮಸ್ಕರಿಸಿ ತನ್ನದು ಎಷ್ಟು ಸರಳತೆಯ ವ್ಯಕ್ತಿತ್ವ.? ದೊಡ್ಡವರು ಬಂದಾಗ ಹೇಗೆ ಗೌರವಿಸಬೇಕು ಅಂತ ಕಿಚ್ಚ ತೋರಿಸಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Related Video