Asianet Suvarna News Asianet Suvarna News

ರವಿಚಂದ್ರನ್ ಹುಟ್ಟುಹಬ್ಬಕ್ಕೆ ಖುಷ್ಬೂ ಸರ್ಪೈಸ್: ನಟ ಧನುಷ್ ಹೊಸಲುಕ್ ಫುಲ್ ಟ್ರೋಲ್!

ನಟಿ ಖುಷ್ಬೂ ನಟ ರವಿಚಂದ್ರನ್‌ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಷಯ ತಿಳಿಸಿದ್ದಾರೆ. ಇನ್ನೂ ಬಾಬಾ ರಾಮ್‌ದೇವ್ ಲುಕ್‌ನಲ್ಲಿ ನಟ ಧನುಷ್ ಕಾಣಿಸಿಕೊಂಡಿದ್ದಾರೆ.

ಮೇ. 30 ರಂದು ರವಿಚಂದ್ರನ್ ಜನ್ಮದಿನ ಇತ್ತು. ಈ ಹಿನ್ನೆಲೆ ವಿಡಿಯೋ ಮೂಲಕವೇ ಖುಷ್ಬೂ, ತಮ್ಮ ನೆಚ್ಚಿನ ನಾಯಕ ನಟನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮ ವಿರಾಟ್ ಕೊಹ್ಲಿ ಆನ್ ಫೀಲ್ಡ್ ಸೆಲೆಬ್ರೆಷನ್ ಅನ್ನು ಅನುಕರಣೆ ಮಾಡಿದ್ದಾರೆ. ಹ್ಯಾಂಡ್ಸಮ್ ಲುಕ್ನಲ್ಲಿ ಕಾಣಿಸಿಕೊಳ್ಳುವ ಧನುಷ್ ಈ ಬಾರಿ ವಿಭಿನ್ನ ಅವತಾರದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಉದ್ದನೆಯ ಕೂದಲು ಮತ್ತು ಗಡ್ಡ ಬಿಟ್ಟಿರುವ ಧನುಷ್, ಕಾರ್ ಪಾರ್ಕಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೆರೂನ್ ಟಿ-ಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಧರಿಸಿದ್ದ ಧನುಷ್, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೂಲ್ ಆಗಿ ಫೋಟೋಗೆ ಪೋಸ್ ಕೊಟ್ರು. 

ಇದನ್ನೂ ವೀಕ್ಷಿಸಿ: ಅಂದು ಕೃಷ್ಣ, ಇಂದು ವಿಷ್ಣು ಪಾತ್ರದಲ್ಲಿ ಕ್ರೇಜೀ ಸ್ಟಾರ್ ಕಿಕ್: ಐತಿಹಾಸಿಕ ಪಾತ್ರಗಳಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್!