
'ಕೆಜಿಎಫ್' ಬೆಡಗಿ ಶ್ರೀನಿಧಿ ಶೆಟ್ಟಿಯ ಸಂಭಾವನೆ ಎಷ್ಟು ಗೊತ್ತಾ?: ಕೇಳಿದ್ರೆ ಶಾಕ್ ಆಗುತ್ತೆ
ಕೆಜಿಎಫ್ ಸಿನಿಮಾ ಬಳಿಕ ನಟಿ ಶ್ರೀನಿಧಿ ಶೆಟ್ಟಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಬಂದಿದೆ. ಇದೀಗ ಅವರ ಸಂಭಾವನೆ ಕೂಡ ಹೆಚ್ಚಾಗಿದೆ.
ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಜಿಎಫ್'ನಲ್ಲಿ ರೀನಾ ಆಗಿ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ಶ್ರೀನಿಧಿ ಶೆಟ್ಟಿ, ಈಗ ತಮ್ಮ ಸಿನಿಮಾದ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ವಿಕ್ರಂ ಜೊತೆ ಕೋಬ್ರಾ ಸಿನಿಮಾದಲ್ಲಿ ನಟಿಸಿರೋ ಶ್ರೀನಿಧಿ ಶೆಟ್ಟಿ, ಇದೀಗ ಬರೋಬ್ಬರಿ 5 ಕೋಟಿ ಸಂಭಾವನೆ ಕೇಳುತ್ತಿದ್ದಾರಂತೆ. ಕೆಜಿಎಫ್ ಬಳಿಕ ಅವರಿಗೆ ಹಲವು ಆಫರ್ಗಳು ಕೂಡ ಹರಿದು ಬರಲು ಆರಂಭವಾದವು. ಹಾಗಿದ್ದರೂ ಕೂಡ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವಸರ ಮಾಡಲಿಲ್ಲ. ‘ಕೆಜಿಎಫ್’ ನಂತರ ಅವರು ಸಹಿ ಮಾಡಿದ ಸಿನಿಮಾ ತಮಿಳಿನ ಕೋಬ್ರಾ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ