KGF Chapter 2: ಹಾಲಿವುಡ್‌ ಕೂಡಾ ಬೆಚ್ಚಿ ಬಿದ್ದಿದೆಯಂತೆ ರಾಕಿ ಭಾಯ್ ಸಿನಿಮಾ ನೋಡಿ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲೂ ರಾಕಿ ಭಾಯ್​ ವೈಲೆನ್ಸ್ ಜೋರಾಗಿದೆ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ 'ಕೆಜಿಎಫ್ 2' (KGF 2) ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲೂ ರಾಕಿ ಭಾಯ್​ ವೈಲೆನ್ಸ್ (Violence) ಜೋರಾಗಿದೆ. ಇನ್ನೂ ದಾಖಲೆಗಳೆಲ್ಲ ಯಶ್​ ಅಬ್ಬರದ ಮುಂದೆ ಬ್ರೇಕ್​ ಆಗಿದೆ. ಒಂದೊಂದೆ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿದೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ನೋಡ ನೋಡುತ್ತಲೇ ವರ್ಲ್ಡ್​ ಬಾಕ್ಸ್​ ಆಫೀಸ್​​ ಲೂಟಿ ಹೊಡೆಯುತ್ತಿದೆ. ಕಳೆದ ವಾರ 'ಕೆಜಿಎಫ್ 2' ಸಿನಿಮಾಗೆ ಹಾಲಿವುಡ್ (Hollywood) ಸಿನಿಮಾ 'ಡಾಕ್ಟರ್ ಸ್ಟ್ರೇಂಜ್' (Doctor Strange 2) ಕಾಂಪಿಟೇಷನ್ ಕೊಟ್ಟಿತ್ತು. ಯಾಕೆಂದರೆ ಮಾರ್ವಲ್ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಭಾರತದಲ್ಲಿ ಅಭಿಮಾನಿಗಳು ಹೆಚ್ಚಿದ್ದಾರೆ. 'ಡಾಕ್ಟರ್ ಸ್ಟ್ರೇಂಜ್' ಸಿನಿಮಾ ಮೊದಲ ದಿನ ಭಾರತದಲ್ಲಿ 30 ಕೋಟಿ ಬಾಚಿಕೊಂಡಿದ್ದು, ಇಷ್ಟೊತ್ತಿಗಾಗಲೇ 100 ಕೋಟಿ ದಾಟಬೇಕಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video