Kerebete: ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿದೆ ಕೆರೆಬೇಟೆ ಕಥೆ..! ಸಿನಿಮಾ ಟ್ರೈಲರ್ ನೋಡಿ ಮೆಚ್ಚಿದ ಬಾದ್ ಷಾ ಸುದೀಪ್!

ಕೆರೆಬೇಟೆ.. ಕನ್ನಡ ಸಿನಿ ಪ್ರೇಕ್ಷಕರಲ್ಲಿ ಹೊಸ ಭರವಸೆ ಮೂಡಿಸಿರೋ ಸಿನಿಮಾ. ಇದಕ್ಕೆ ಕಾರಣ ಕೆರೆಬೇಟೆ ಟ್ರೈಲರ್.ಅಪ್ಪಟ ಹಳ್ಳಿ ಸೊಗಡಿನ ಸೊಬಗಿನ ಕಥೆ ಇರೋ ಕೆರೆ ಬೇಟೆ ಸಿನಿಮಾದ ಟ್ರೈಲರ್ ತುಂಬಾ ವಿಶೇಷವಾಗಿದೆ. ಇದುವರೆಗೂ ಎಲ್ಲೂ ನೋಡಿರದ ಕಂಟೆಂಟ್ ಈ ಸಿನಿಮಾದಲ್ಲಿದೆ ಅಂತ ಟ್ರೈಲರ್ ಸಾರಿ ಹೇಳಿದೆ.

Share this Video
  • FB
  • Linkdin
  • Whatsapp

ಮಲೆನಾಡಿನಲ್ಲಿ ಇಂದಿಗೂ ಆಚರಣೆಯಲ್ಲಿರೋ ಸಂಸ್ಕೃತಿ ಆಚಾರ ವಿಚಾರನ್ನ ಕನ್ನಡ ಸಿನಿ ಪ್ರೇಕ್ಷಕರಿಗೆ ಮುಟ್ಟಿಸೋ ಪ್ರಯತ್ನ ಈ ಸಿನಿಮಾ. ರಿಷಬ್ ಶೆಟ್ಟಿ ಕಾಂತಾರದಲ್ಲಿ ಹೇಗೆ ಭೂತಾರಾಧನೆ ತೋರಿಸಿದ್ರೋ ಹಾಗೆ ಕೆರೆ ಬೇಟೆಯಲ್ಲಿ(Kerebete movie) ಮಲೆನಾಡಿನ ಹಲವು ಆಚರಣೆಗಳನ್ನ ತೋರಿಸೋ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕೆರೆ ಬೇಟೆ ಹೀರೋ ಆಗಿ ಗೌರಿ ಶಂಕರ್ ನಟಿಸಿದ್ರೆ, ನಾಯಕಿಯಾಗಿ ಬಿಂದು ಶಿವರಾಮ್ ನಟಿಸಿದ್ದಾರೆ. ಕೆರೆ ಬೇಟೆ ಟ್ರೈಲರ್‌ನನ್ನ(Trailer) ನಟ ಕಿಚ್ಚ ಸುದೀಪ್ ರಿಲೀಸ್ ಮಾಡಬೇಕಿತ್ತು. ಆದ್ರೆ ಕಿಚ್ಚನಿಗೆ(Kiccha Sudeep) ಆನಾರೋಗ್ಯ ಆಗಿದ್ರಿಂದ ಅದು ಸಾಧ್ಯ ಆಗಲಿಲ್ಲ. ಹೀಗಾಗಿ ಚಿತ್ರತಂಡಕ್ಕೆ ಕ್ಷಮೆ ಕೇಳಿದ ಕಿಚ್ಚ ಈ ಸಿನಿಮಾ ತಂಡಕ್ಕೆ ಒಳ್ಳೆಯದಾಗ್ಲಿ ಎಂದಿದ್ದಾರೆ. ಡೈರೆಕ್ಟರ್ ರಾಜಗುರು ನಿರ್ದೇಶನದ ಕೆರೆಬೇಟೆ ಸಿನಿಮಾ ಇದೇ ತಿಂಗಳ ಮಾರ್ಚ್-15 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ದಿನಕರ ತೂಗುದೀಪ್ ಇದನ್ನ ಪ್ರಸೆಂಟ್ ಮಾಡಿದ್ರೆ ಜಯಣ್ಣ ಈ ಸಿನಿಮಾವನ್ನ ವಿತರಣೆ ಮಾಡುತ್ತುದ್ದಾರೆ.

ಇದನ್ನೂ ವೀಕ್ಷಿಸಿ: 'ಕರಟಕ ಧಮನಕ'ಬಿಡುಗಡೆಗೆ ಕೌಂಟ್ ಡೌನ್!ಚಿಕ್ಕೋಡಿಯಲ್ಲಿ ಶಿವಣ್ಣ-ಪ್ರಭುದೇವ ಕ್ರೇಜ್..!

Related Video