ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿ ಸಿನಿಮಾ ಹೇಗಿದೆ ಗೊತ್ತಾ..?: ಮುತ್ತುಲಕ್ಷ್ಮಿ ಮತ್ತಿನಲ್ಲಿ ತೇಲಿಸುತ್ತಾರೆ ಮಿಲನಾ..!
ಗಂಡು ಕುಲಕ್ಕೆ ದೊಡ್ಡ ಮೆಸೇಜ್ ಕೊಟ್ಟ ಡಾರ್ಲಿಂಗ್ ಕೃಷ್ಣ.!
ಕೌಸಲ್ಯ ಸುಪ್ರಜಾ ರಾಮನಿಂದ ತಿಳಿಯುತ್ತೆ ಗಂಡು ಅನ್ನೋ ಸತ್ಯ.!
ಸ್ಯಾಂಡಲ್‌ವುಡ್‌ನಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಸುಪ್ರಭಾತ..!
ಒಂದು ಸಿನಿಮಾ ಸಕ್ಸಸ್ ಆಗ್ಬೇಕು ಅಂದ್ರೆ ಸ್ಟ್ರಾಂಗ್ ಸ್ಟೋರಿ ಇರಬೇಕು. ಆ ಕಥೆಗೆ ತಕ್ಕನಾದ ಕಲಾವಿದರು ಬರಬೇಕು. ಅದರ ಜೊತೆ ಟ್ಯಾಲೆಂಟೆಡ್ ಟೈರೆಕ್ಟರ್, ಟೆಕ್ನೀಷಿಯನ್ಸ್ ಟೀಂ ಸೇರಿದ್ರೆ ಮುಗಿತು. ನೀವ್ ಕೊಟ್ಟ ದುಡ್ಡಿಗೆ ಯಾವ್ದೇ ಮೋಸ ಇಲ್ದೆ ಭಾರ್ಜರಿ ಎಂಟರ್ಟೈನ್ಮೆಂಟ್ ಸಿನಿಮಾ ಸಿಗುತ್ತೆ. ನೀವು ನಿಜವಾದ ಗಂಡಸಾ..ಗಂಡಸು ಅಂದ್ರೆ ಯಾರು.? ಈ ಸತ್ಯ ತಿಳಿಬೇಕು ಅಂದ್ರೆ ಡಾರ್ಲಿಂಗ್ ಕೃಷ್ಣ ನಟನೆಯೆ ‘ಕೌಸಲ್ಯ ಸುಪ್ರಜಾ ರಾಮ’(Kausalya Supraja Rama) ಸಿನಿಮಾ ನೋಡ್ಬೇಕು. ನಿರ್ದೇಶಕ ಶಶಾಂಕ್ ಹಾಗೂ ಡಾರ್ಲಿಂಗ್ ಕಷ್ಣ ಸೇರಿ ಈ ಸಿನಿಮಾ ಮೂಲಕ ಗಂಡು ಕುಲಕ್ಕೆ ದೊಡ್ಡ ಮೆಸೇಜ್ ಕೊಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಅಪ್ಪ ಹೇಳಿಕೊಡುವ ಪುರುಷತ್ವದ ಪಾಠ ಕೇಳಿ ಬೆಳೆಯುವ ನಾಯಕ ಹೇಗೆ ಗಂಡು ಎಂಬ ಅಹಂನಿಂದ ಸಂಬಂಧಗಳ ಮೌಲ್ಯ ತಿಳಿಯದೇ ಬದುಕುತ್ತಾನೆ, ಲವ್ ಲೈಫ್ ಶುರುವಾಗಿ ಅದನ್ನ ಹೇಗೆ ಹಾಳು ಮಾಡಿಕೊಳ್ತಾನೆ? ಆ ಬಳಿಕ ಹೇಗೆ ಅದನ್ನು ಅರಿತು ಹೇಗೆ ಬದಲಾಗ್ತಾನೆ ಅನ್ನೋದೆ ಈ ಚಿತ್ರದ ಒನ್‌ಲೈನ್ ಸ್ಟೋರಿ. ಹೆಣ್ಮಕ್ಕಳ ಮುಂದೆ ತಲೆ ಬಾಗಬಾರದು ಎಂಬ ಹಠದಲ್ಲಿರೋ ರಾಮೇಗೌಡನ(Ramegowda) ಕಥೆ ಕೌಸಲ್ಯಾ ಸುಪ್ರಜಾ ರಾಮ. ತಾನು ಗಂಡಸು ಎಂಬ ಪೊಗರು ಆತನ ಮೈಯಲ್ಲಿ ತುಂಬಿ ಕೊಂಡಿರುತ್ತೆ. ಅಂಥವನ ಬಾಳಲ್ಲಿ ಶಿವಾನಿ ಅನ್ನೋ ಸುಂದರಿ ಎಂಟ್ರಿ ಆದ್ರೆ ಏನೆಲ್ಲಾ ಆಗುತ್ತೆ ಅನ್ನೋದನ್ನ ಹ್ಯೂಮರಸ್ ಕಾಮಿಡಿ ಜೊತೆ ಎಮೋಷನಲ್ ಆಗಿ ಕಟ್ಟಿಕೊಡಲಾಗಿದೆ. ರಾಮೇಗೌಡನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ(Darling Krishna) ನಟಿಸಿದ್ರೆ, ಶಿವಾನಿ (Shivani) ರೋಲ್ಅನ್ನ ಬೃಂಧಾ ಬಣ್ಣ ಹಚ್ಚಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಈ ದಿನ ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಕಿರಿಕಿರಿ..ನೆಮ್ಮದಿಗಾಗಿ ಈ ದೇವರ ಆರಾಧನೆ ಮಾಡಿ