Asianet Suvarna News Asianet Suvarna News

'90 ಹಾಕು ಕಿಟ್ಟಪ್ಪ' ಎನ್ನುತ್ತ ಬಂದ ನಿಧಿಮಾ: ಎಣ್ಣೆ ಹಾಕಿ ಡಾರ್ಲಿಂಗ್ ಕೃಷ್ಣ ಪತ್ನಿ ಫುಲ್ ಟೈಟ್‌..!

‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ‘90 ಹಾಡು’ ರಿಲೀಸ್!
ವೀಕೆಂಡ್ ಮಸ್ತಿಗೆ ಮಿಲನಾ ನಾಗರಾಜ್ ಎಣ್ಣೆ ಸಾಂಗ್ ಗಿಫ್ಟ್!
‘90 ಹಾಕು ಕಿಟ್ಟಪ್ಪ’ ಎನ್ನುತ್ತ ಬಂದ ನಿಮ್ಮ ನಿಧಿಮಾ..!
 

ಬೆಳಗ್ಗೆ ಎದ್ದ ಕೋಡ್ಲೆ ಹಳೇ ಬೆಂಗಳೂರು(Bengaluru) ಬೀದಿಗಳನ್ನ ಅಲೆದಾಡಿದ್ರೆ ಎಲ್ಲಾದ್ರು ಒಂದ್ ಕಡೆ ನಿಮ್ ಕಿವಿಗೆ ಒಂದು ಹಾಡು ಬಂದು ಅಪ್ಪಳಿಸುತ್ತೆ. ಅದೇ ಕೌಸಲ್ಯಾ ಸುಪ್ರಜಾ ರಾಮ(Kausalya Supraja Rama) ಪೂರ್ವ ಸಂಧ್ಯಾ ಪ್ರವರ್ತತೇ ಅನ್ನೋ ದೇವರ ಗೀತೆ ಕೇಳುತ್ತೆ. ಆದ್ರೆ ಈಗ ನಮ್ ಸ್ಯಾಂಡಲ್ವುಡ್‌ನಲ್ಲಿ ಕೌಸಲ್ಯಾ ಸುಪ್ರಜಾ ರಾಮ ಜಪದ ಜೊತೆ 90 ಹಾಕು ಕಿಟ್ಟಪ್ಪ ಅನ್ನುತ್ತಿದ್ದಾರೆ ನಿಮ್ಮ ನಿಧಿಮಾ. ಎಣ್ಣೆ ಹೋಟ್ಕೊಂಡು ಡಾರ್ಲಿಂಗ್ ಕೃಷ್ಣ(Darling krishna) ಪತ್ನಿ ಫುಲ್ ಟೈಟ್ ಆಗಿದ್ದಾರೆ. ಲವ್ ಮಾಕ್ಟೆಲ್ ಫೇಮ್ನ ಡಾರ್ಲಿಂಗ್ ಕೃಷ್ಣ ಹಾಗು ಮೊಗ್ಗಿನ ಮನಸ್ಸು, ಬಚ್ಚನ್, ಮುಂಗಾರು ಮಳೆ2 ಖ್ಯಾತಿಯ ಶಶಾಂಕ್ ಒಟ್ಟಾಗಿ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಇದೇ ಜುಲೈ 28ಕ್ಕೆ ರಿಲೀಸ್ ಆಗ್ತಿದೆ. ಈ ಸಿನಿಮಾದ ಹಾಡೇ ಈ 90 ಹಾಕು ಕಿಟ್ಟಪ್ಪ ಸಾಂಗ್. ಈ ಹಾಡಿನಲ್ಲಿ ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನಾ ನಾಗರಾಜ್ (Milana Nagaraj) ಒಂದ್ ಸಿಪ್ ಹಾಕಿ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಹೆಣ್ಣುಮಕ್ಕಳ ಎಣ್ಣೆ ಸಾಂಗ್ ಲೀಸ್ಟ್ಗೆ ಈಗ ಈ 90 ಹಾಕು ಕಿಟ್ಟಪ್ಪ ಸಾಂಗ್ ಕೂಡ ಸೇರಿಕೊಂಡಿದೆ.

ಇದನ್ನೂ ವೀಕ್ಷಿಸಿ:  ಮಾತಿಲ್ಲ..ಕಥೆಯಿಲ್ಲ..ಓನ್ಲಿ ಫೈಟಿಂಗ್: ಒಂದೊಂದು ಬಡಿದಾಟಗಳೂ ಏಕಾಏಕಿ ವೈರಲ್ ..!