ಕನ್ನಡ ಚಿತ್ರರಂಗಕ್ಕೆ ಕಾರ್ತಿಕ್ ಜಯರಾಮ್ ಗುಡ್‌ ಬೈ..! :ಸ್ಯಾಂಡಲ್‌ವುಡ್‌ನಲ್ಲಿ ನನ್ನನ್ನ ತುಳಿಯುತ್ತಿದ್ದಾರೆ ಎಂದ ಜೆ.ಕೆ.

ಕಿರುತೆರೆ, ಹಿರಿತೆರೆ ನಟ ಕಾರ್ತಿಕ್ ಜಯರಾಮ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಕಷ್ಟ ಎದುರಾಗಿದೆಯಂತೆ. ಇದನ್ನ ಸ್ವತಹ ನಟ ಕಾರ್ತಿಕ್ ಜಯರಾಮ್ ಅವರೇ ಹೇಳಿಕೊಂಡಿದ್ದಾರೆ. 
 

Share this Video
  • FB
  • Linkdin
  • Whatsapp

ಜಯರಾಮ್ ಕಾರ್ತಿಕ್ .. ಹೀಗಂತ ಹೇಳಿದ್ರೆ ಅದು ಯಾರಪ್ಪ ಅಂತ ನೀವು ತಲೆ ಕೆಡಿಸಿಕೊಳ್ತೀರಾ. ಅದೆ ಜೆಕೆ ಅಂದ್ರೆ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರಿಗೂ ಸಿನಿಮಾ ಆಡಿಯನ್ಸ್‌ಗೂ ಗೊತ್ತು. ಯಾಕಂದ್ರೆ ಜಯರಾಮ್ ಕಾರ್ತಿಕ್ ಸ್ಮಾಲ್ ಸ್ಕ್ರೀನ್‌ನಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು. ಇನ್ನು ಬಿಗ್ ಸ್ಕ್ರೀನ್‌ನಲ್ಲಿ ಜೆಕೆ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಕೊನೆಗೆ ಹೀರೋ ಆಗಿ ಮಿಂಚಿ ಕ್ರಿಕೆಟ್ ಆಡುತ್ತಾ ಹೆಸರು ಸಂಪಾಧಿಸಿದ್ರು. ಇದೀಗ ನಟ ಜೆಕೆ ದಿಢೀರ್ ಅಂತ ಕನ್ನಡ ಚಿತ್ರರಂಗಕ್ಕೆ ಗುಡ್ಬೈ ಹೇಳೋ ನಿರ್ಧಾರ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಮಂಡ್ಯ ಮರಿ ಗೌಡ್ರ ಮನೆಯಲ್ಲಿ ಸಂಭ್ರಮವೋ ಸಂಭ್ರಮ: ಮದುಮಗನಾಗಿ ಬಾಸಿಂಗ ಕಟ್ಟಿದ ಅಭಿಷೇಕ್ ಅಂಬರೀಶ್.!

Related Video