ಕಾಂತಾರ ಪ್ರೀಕ್ವೆಲ್ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು; ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರಿಷಬ್ ಶೆಟ್ಟಿ

ಕಾಂತಾರ ಪ್ರೀಕ್ವೆಲ್ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಕಾಂತಾರ ಪಾರ್ಟ್-2 ಬರುತ್ತೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿಬರುತ್ತಿದೆ. ಹೀಗಿರುವಾಗ ಈಗಾಗಲೇ ಬಂದಿರುವುದು ಕಾಂತಾರ ಪಾರ್ಟ್-2 ಇನ್ಮುಂದೆ ಬರುವುದು ಪ್ರಿಕ್ವೆಲ್ ಎಂದು ಹೇಳಿದ್ದರು. ಇದೀಗ ಕಾಂತಾರ-2 ಬಗ್ಗೆ ರಿಷಬ್ ಮಾತನಾಡಿದ್ದಾರೆ. ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಾಂತಾರದಲ್ಲಿ ಇಲ್ಲದೇ ಇರುವ ವಿಚಾರ ಕಾಂತಾರ 2ನಲ್ಲಿ ಇರಲಿದೆ ಎಂದು ಹೇಳಿದರು. ಪ್ರಿಕ್ವೆಲ್ ಕೆಲಸ ನಡೆಯುತ್ತಿದೆ. ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂದು ಹೇಳಿದರು. ಇದೇ ಸಮಯದಲ್ಲಿ ಯಶ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಇದೆ ಎಂದು ಹೇಳಿದರು. ಜೂ. ಎನ್ ಟಿ ಆರ್ ಮೇಲೆ ವಿಶೇಷ ಪ್ರೀತಿ, ಯಾಕೆಂದರೆ ಅವರ ತಾಯಿ ನಮ್ಮ ಊರಿನವರು ಎಂದು ರಿಷಬ್ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video