ಕೆರಾಡಿ ಕಾಡಿನ ಮಳೆಯಲ್ಲಿ ಕಾಂತಾರ-2 ಶೂಟಿಂಗ್: ಲೊಕೇಶನ್ ಹಂಟಿಂಗ್‌ನಲ್ಲಿ ರಿಷಬ್ ಫುಲ್ ಬ್ಯುಸಿ.!
ಅದ್ಧೂರಿ ಹುಟ್ಟುಹಬ್ಬದ ಬಳಿಕ ‘ಕಾಂತಾರ’ ಕಾಡಿನತ್ತ ರಿಷಬ್
ಇನ್ಮುಂದೆ ‘ಕಾಂತಾರ-2’ ಚಿತ್ರದ ಕೆಲಸ ಎಂದ ಡಿವೈನ್ ಸ್ಟಾರ್
ಕೆರಾಡಿ ಕಾಡಿನ ಮಳೆಯಲ್ಲಿ ‘ಕಾಂತಾರ-2’ ಶೂಟಿಂಗ್
ರಿಷಬ್ ಶೆಟ್ಟಿ ಕಾಂತಾರ ( Kantara)ವರ್ಕ್ ಎಲ್ಲಿಗೆ ಬಂದಿದೆ..? ಶೂಟಿಂಗ್ ಹೋಗೋದಕ್ಕೆ ರಿಷಬ್ ಶೆಟ್ಟಿ(Rishabh Shetty) ಫುಲ್ ರೆಡಿನಾ.? ಯೆಸ್, ಎನ್ನುತ್ತಿದ್ದಾರೆ ನಟ ರಿಷಬ್ ಶೆಟ್ಟಿ. ಈಗಾಗ್ಲೆ ಕಾಂತಾರ 2ಗೆ ಬೇಕಾದ ಡೈಲಾಗ್‌ಗಳನ್ನ ಬರೆದಿಟ್ಟುಕೊಂಡಿರೋ ಡಿವೈನ್ ಸ್ಟಾರ್ ಈಗ ಕರಾವಳಿ ಕಡಲ ತೀರದ ಕಾಡಿನ ಕಡೆ ಲೊಕೇಷನ್ ಹಂಟಿಂಗ್ ಗೆ ಹೋಗುತ್ತಿದ್ದಾರಂತೆ. ಪ್ರೀ ಪ್ರೋಡಕ್ಷನ್ ವರ್ಕ್ ಮಾಡುತ್ತಿರೋ ರಿಷಬ್ ಶೆಟ್ಟಿ ಪಾತ್ರಗಳ ಆಯ್ಕೆಯ ಪ್ರೋಗ್ರೆಸ್ ಅನ್ನ ಕೈಗೆತ್ತಿಕೊಂಡಿದ್ದಾರಂತೆ. ಕಾಂತಾರ ಚಾಪ್ಟರ್1 ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಶಿವನ ಗ್ಯಾಂಗ್ ದಟ್ಟಾರಣ್ಯದ ಮಧ್ಯೆ ಸಿಕ್ಕಾಪಟ್ಟೆ ಮಳೆಯಲ್ಲಿ ಬೃಹತ್ ಮರವೊಂದನ್ನ ಕಡಿಯುತ್ತಿರುತ್ತಾರೆ. ಆ ಮರ ಫಾರೆಸ್ಟ್ ಆಫೀಸರ್ ಕಿಶೋರ್ ಕಾರಿನ ಮೇಲೆ ಬೀಳುತ್ತೆ. ಮಳೆಯಲ್ಲೇ ಶೂಟಿಂಗ್ ಮಾಡಿರೋ ಈ ದೃಶ್ಯ ಕಾಂತಾರದ ವೈಭವನ್ನ ಹೆಚ್ಚಿಸಿತ್ತು. ಈಗ ಕಾಂತಾರ 2(Kantara 2) ಸಿನಿಮಾಗೆ ಮತ್ತೊಂದು ಲೆವೆಲ್‌ಗೆ ಹೋಗಿ ಪ್ಲಾನ್ ಮಾಡಿರೋ ರಿಷಬ್, ಕಾಂತಾರ ಸಿನಿಮಾದ ಶೇಕಡ 70ರಿಂದ 80 ಪರ್ಸೆಂಟ್ ಶೂಟಿಂಗ್ ಅನ್ನ ಮಳೆಯಲ್ಲೇ ಮಾಡುತ್ತಾರಂತೆ. ಹೀಗಾಗಿ ಆಗಸ್ಟ್‌ನಿಂದ ಶೂಟಿಂಗ್ ಶುರು ಮಾಡೋದಕ್ಕೆ ಎಲ್ಲಾ ತಯಾರಿಯಾಗಿದೆ.
ಇದನ್ನೂ ವೀಕ್ಷಿಸಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಯಮಧೂತನಂತೆ ಬೆಟ್ಟದಿಂದ ಹರಿದು ಬಂದ ನೀರು, ವಿಡಿಯೋ ಭಯಾನಕ