'Love...ಲಿ’ ಮೂಡ್‌ನಲ್ಲಿ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ..!

ಕಣ್ಣಲ್ಲೇ ನಟಿಸುವ ನಾಯಕ, ಕಂಚಿನ ಕಂಠದ ಗಾಯಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ರಾ ವಿಲನ್ ಆಗಿ ಗುರುತಿಸಿಕೊಂಡಿರೋ ಕಲಾವಿಧರ ವಸಿಷ್ಠ ಸಿಂಹ (Vasista Simha) ಈಗ ಹೀರೋ ಆಗಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಕಣ್ಣಲ್ಲೇ ನಟಿಸುವ ನಾಯಕ, ಕಂಚಿನ ಕಂಠದ ಗಾಯಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ರಾ ವಿಲನ್ ಆಗಿ ಗುರುತಿಸಿಕೊಂಡಿರೋ ಕಲಾವಿಧರ ವಸಿಷ್ಠ ಸಿಂಹ (Vasista Simha) ಈಗ ಹೀರೋ ಆಗಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಕಳನಟನಾಗಿಯೂ ನಾಯಕ ನಟನಾಗಿಯೂ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಟಿರೋ ವಸಿಷ್ಠ ಸಿಂಹ ಈಗ ಪಕ್ಕಾ ಲವರ್ ಬಾಯ್ ಆಗಿ ನಿಮ್ಮನ್ನ ರಂಜಿಸಲು ಸಿದ್ಧರಾಗಿದ್ದಾರೆ. 

ಕೆಜಿಎಫ್ ನಿರ್ಮಾಪಕರಿಂದ ಡಾಲಿ ಧನಂಜಯ್ 'ಹೊಯ್ಸಳ' ಚಿತ್ರಕ್ಕೆ ಓಂಕಾರ.!

ಚಿಟ್ಟೆ ವಸಿಷ್ಠ ನಾಯಕನಾಗಿ ನಟಿಸುತ್ತಿರೋ ಹೊಸ ಚಿತ್ರಕ್ಕೆ ಲವ್ ಲಿ ಅನ್ನೋ ಬ್ಯೂಟಿಫುಲ್ ಟೈಟಲ್ ಇಡಲಾಗಿದ್ದು, ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್ ನಲ್ಲಿ ಚಿಟ್ಟಿ ಮಿಂಚಿದ್ದಾರೆ. ‘Love...ಲಿ’ ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕೂಡ ಚಿತ್ರದಲ್ಲಿದೆ. ಚೇತನ್ ಕೇಶವ್ ‘Love...ಲಿ’ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇನ್ನುಳಿದ ಕಲಾವಿಧರ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿಲ್ಲ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

Related Video