ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ: ಹಿರಿಯ ನಟಿ ಲೀಲಾವತಿಗೆ ಸನ್ಮಾನ
ಹಿರಿಯ ನಟಿ ಲೀಲಾವತಿ ಅವರಿಗೆ ಕನ್ನಡ ಚಿತ್ರೋದ್ಯಮದ ಕಡೆಯಿಂದ ವಿಶೇಷ ಸನ್ಮಾನ ಮಾಡಲಾಗಿದೆ.
ಸ್ಯಾಂಡಲ್ ವುಡ್‌ನ ಹಿರಿಯ ನಟಿ ಡಾ.ಎಂ ಲೀಲಾವತಿಯವರಿಗೆ ಕನ್ನಡ ಚಿತ್ರೋದ್ಯಮದ ಕಡೆಯಿಂದ ಸನ್ಮಾನ ಮಾಡಿ ಗೌರವಿಸಲಾಗಿದೆ. ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ಚಿತ್ರೋದ್ಯಮ ಸನ್ಮಾನ ಮಾಡಿದೆ. 50 ಕ್ಕೂ ಹೆಚ್ಚು ಕಲಾವಿದರಿಂದ ಸನ್ಮಾನಿಸಲಾಗಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿಗೆ ಅವರ ತೋಟದ ಮನೆಯಲ್ಲಿ ಸನ್ಮಾನ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ನಟ ದೊಡ್ಡಣ್ಣ, ಸುಂದರ್ ರಾಜ್, ಶ್ರೀಧರ್, ಜೈಜಗದೀಶ್, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ ಹಾಗೂ ನಟಿಯರಾದ ಪೂಜಾಗಾಂಧಿ, ಪದ್ಮವಾಸಂತಿ, ಗಿರಿಜಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು.