Asianet Suvarna News Asianet Suvarna News

ಜೂ.ಎನ್‌ಟಿಆರ್‌ ಭಾಷಾ ಪ್ರೇಮಕ್ಕೆ ಕನ್ನಡಿಗರು ಫಿದಾ! ಯಂಗ್ ಟೈಗರ್ ಕನ್ನಡ ಪ್ರೀತಿಗೆ ಸಾಕ್ಷಿ ಈ ಘಟನೆಗಳು!

ಜೂನಿಯರ್ ಎನ್‌ಟಿಆರ್ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಜೂನಿಯರ್ ಎನ್‌ಟಿಆರ್ ತಾಯಿ ಕುಂದಾಪುರದವರು. ಹೀಗಾಗಿ, ಅವರಿಗೆ ಕನ್ನಡದ ನಂಟಿದೆ. ‘ಆರ್‌ಆರ್‌ಆರ್’ ಚಿತ್ರದ ಕನಡ ವರ್ಷನ್‌ಗೆ ಅವರೇ ಡಬ್ ಮಾಡಿದ್ದರು ಅನ್ನೋದು ವಿಶೇಷ.

ಜೂನಿಯರ್ ಎನ್‌ಟಿಆರ್(Jr NTR) ಅವರ ಕನ್ನಡ ಪ್ರೀತಿ ಇಲ್ಲಿಗೆ ಮುಗಿದಿಲ್ಲ. ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್‌ನ ಜೂನಿಯರ್ ಎನ್‌ಟಿಆರ್ ಒಮ್ಮೆ ನಡೆಸಿಕೊಟ್ಟಿದ್ದರು. ಅಲ್ಲಿಗೆ ಕನ್ನಡ ಸ್ಪರ್ಧಿಗಳ ಆಗಮನ ಆಗಿತ್ತು. ಈ ವೇಳೆ ಅವರು ಕನ್ನಡದಲ್ಲೇ(Kannada) ಸಂವಹನ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಜೂನಿಯರ್ ಎನ್‌ಟಿಆರ್ ಅವರಿಗೆ ಪುನೀತ್ ರಾಜ್‌ಕುಮಾರ್(Puneeth Rajkumar)ಜೊತೆ ಒಳ್ಳೆಯ ಗೆಳೆತನ ಇತ್ತು. ಪುನೀತ್ ನಟನೆಯ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯಾ.. ಗೆಳೆಯಾ..’ ಹಾಡನ್ನು ಜೂನಿಯರ್ ಎನ್‌ಟಿಆರ್ ಅವರು ಹಾಡಿದ್ದರು. ಆರ್‌ಆರ್‌ಆರ್‌ ಪ್ರಮೋಷನ್‌ಗೆ ಬಂದಾಗ  ಅಪ್ಪೂಗಾಗಿ ಕೊನೆಯದಾಗಿ ಈ ಹಾಡು ಹಾಡುತ್ತೇನೆಂದು ಭಾವುಕರಾಗಿ ಹಾಡಿದ್ದರು. ಇನ್ನು ಪುನೀತ್ ಅಗಲಿದಾಗಲೂ ಅಪ್ಪೂ ಗಾಗಿ ಬಂದು ಕಣ್ಣೀರಾಕಿದ್ದರು. ನಂತರ ಅಪ್ಪೂಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಜೂನಿಯರ್ ಎನ್ಟಿಆರ್ ಸಂಪೂರ್ಣವಾಗಿ ಅಪ್ಪೂ ಬಗ್ಗೆ ಕನ್ನಡದಲ್ಲೆ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದರು. ಹೀಗೆ ಜೂನಿಯರ್ ಎನ್ಟಿಆರ್ ಆಗಾಗ ತಮ್ಮ ಕನ್ನಡ ಪ್ರೀತಿ ತೋರುತ್ತಾ ಕನ್ನಡಿಗರ ಹೃದಯ ಗೆಲ್ಲುತ್ತಲೇ ಇರುತ್ತಾರೆ. ಅವರ ಹುಟ್ಟುಹಬ್ಬವಿಂದು(Birthday) ದೇವರ ಸಿನಿಮಾದ ಹಾಡು ರಿಲೀಸ್ ಆಗಿದೆ. ಜೂನಿಯರ್ ಎನ್‌ಟಿಆರ್‌ಗೆ ಪ್ರಪಂಚದಾದ್ಯಂತ ಫ್ಯಾನ್ಸ್ ಇದ್ದಾರೆ. ಜಪಾನ್ ಅಭಿಮಾನಿಗಳು ಸಹ ಯಂಗ್ ಟೈಟಗರ್ ಹುಟ್ಟುಹಬ್ಬ ಆಚರಿಸಿದ್ದು ವೀಡಿಯೋ ವೈರಲ್ ಆಗುತ್ತಿದೆ. 

ಇದನ್ನೂ ವೀಕ್ಷಿಸಿ: Rave party: ರೇವ್ ಪಾರ್ಟಿಗೂ ಕಾಮನ್ ಪಾರ್ಟಿಗೂ ಇರುವ ವ್ಯತ್ಯಾಸವೇನು? ನಟಿ ಹೇಮಾ ವಿಡಿಯೋದಲ್ಲಿ ಹೇಳಿದ್ದೇನು..?