Asianet Suvarna News Asianet Suvarna News

Rave party: ರೇವ್ ಪಾರ್ಟಿಗೂ ಕಾಮನ್ ಪಾರ್ಟಿಗೂ ಇರುವ ವ್ಯತ್ಯಾಸವೇನು? ನಟಿ ಹೇಮಾ ವಿಡಿಯೋದಲ್ಲಿ ಹೇಳಿದ್ದೇನು..?

ಸಿಲಿಕಾನ್ ಸಿಟಿಯ ರೇವ್ ಪಾರ್ಟಿಯಲ್ಲಿ ಸ್ಪೆಷಲ್ ಗೆಸ್ಟ್ ಯಾರು..?
ಸಿಸಿಬಿ ಆಂಟಿ ನಾರ್ಕೊಟಿಕ್ಸ್ ಅಧಿಕಾರಿಗಳಿಗೆ ಸಿಕ್ಕಿದ್ದು ಏನೇನು..? 
ಪತ್ತೆಯಾದ ನಶೆ ಪದಾರ್ಥಗಳನ್ನ ನೋಡಿ ಅಧಿಕಾರಿಗಳೇ ದಂಗು..!

ರಾಜ್ಯರಾಜಧಾನಿ ಬೆಂಗಳೂರನ್ನ(Bengaluru) ಮಾಯಾನಗರಿ, ಐಟಿಹಬ್, ಗಾರ್ಡನ್ ಸಿಟಿ ಅಂತೆಲ್ಲ ಕರಿತಾರೆ. ಆದ್ರೆ ರಾತ್ರಿ ಆದರೆ ಸಾಕು ಬೆಂಗಳೂರಿನಲ್ಲಿ ಮತ್ತೊಂದು ಲೋಕವೇ ಅನಾವರಣ ಆಗುತ್ತೆ. ಅದುವೇ ಪಾರ್ಟಿ ಲೋಕ. ಈ ಸಿಲಿಕಾನ್ ಸಿಟಿಯಲ್ಲಿ ವಿಕೆಂಡ್ ಪಾರ್ಟಿ ಕಾಮನ್. ಆದ್ರೆ ಇತ್ತೀಚೆಗೆ ನಟ್ಟ ನಡುರಾತ್ರಿಯಲ್ಲಿ ಅದ್ಧೂರಿಯಾಗಿ ನಡೆದ ಪಾರ್ಟಿ, ಬೆಳ್ಳಂಬೆಳಗ್ಗೆ ಕಣ್ಬಿಟ್ಟ ಬೆಂಗಳೂರಿಗರನ್ನ ಬೆಚ್ಚಿಬೀಳೋ ಹಾಗೆ ಮಾಡಿದೆ. ಅದು ಎಂಥಾ ಪಾರ್ಟಿ ಗೊತ್ತಾ..? ಮಾದಕ ಲೋಕವನ್ನೇ ಸೃಷ್ಟಿಮಾಡಿಸಿದ್ದ.. ರೇವ್ ಪಾರ್ಟಿ(Rave party). ಈ ರೇವ್ ಪಾರ್ಟಿಯಲ್ಲಿ ನಶೆಯನ್ನ ತಲೆಗೇರಿಸಿಕೊಂಡು, ತೇಲಾಡ್ತಾ, ಓಲಾಡ್ತಾ ಈ ಜಗತ್ತನ್ನೇ ಮರೆತು ಬಿಟ್ಟಿರ್ತಾರೆ. ಇಂಥಾ ಪಾರ್ಟಿಗಳು ಹೊರ ಜಗತ್ತಿಗೆ ಗೊತ್ತಾಗದೇ ಹಾಗೆ ಗಪ್‌ಚುಪ್ ಆಗಿ ಮಾಡ್ತಿರ್ತಾರೆ. ಈಗ ಬೆಂಗಳೂರಿನಲ್ಲೂ ಇಂಥದ್ದೊಂದು ರೇವ್ ಪಾರ್ಟಿ ನಡೆದಿರೋದು ಬೆಳಕಿಗೆ ಬಂದಿದೆ. ಸೊಸೈಟಿಯಲ್ಲಿ ತುಂಬಾ ಸೊಫೆಸ್ಟಿಕೇಟೆಡ್ ಆಗಿ ಇರೋರೆಲ್ಲ ಈ ರೇವ್ ಪಾರ್ಟಿಯಲ್ಲಿ ಇದ್ದರು ಅನ್ನೊ ಮಾಹಿತಿ ಇದೆ. ಅಂದ್ರೆ ಮಾಡಲ್‌ಗಳು, ಆರ್‌ಜೆಗಳು. ಟೆಕ್ಕಿಗಳು ಹಾಗೂ ಈ ಪಾರ್ಟಿಯಲ್ಲಿ ಸ್ಪೆಶಲ್ ಗೆಸ್ಟ್ ಆಗಿದ್ದವರು ತೆಲುಗಿನ ನಟ ನಟಿಯರು.

ಇದನ್ನೂ ವೀಕ್ಷಿಸಿ:  Prajwal Revanna: ಮತ್ತೊಂದು ಆಡಿಯೋ ಔಟ್.. ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್‌ಗೆ ಬಿಗ್ ಟ್ವಿಸ್ಟ್..?