Govinda Govinda: ಕಾಮಿಡಿ ಥ್ರಿಲ್ಲರ್ ಜಾನರ್‌ನಲ್ಲಿ ನಟ ಸುಮನ್ ಶೈಲೇಂದ್ರ

ಸುಮಂತ್ ಶೈಲೇಂದ್ರ ನಟಿಸಿರುವ ಕಾಮಿಡಿ ಥಿಲ್ಲರ್ ಕಥಾಹಂದರ ಇರುವ ಗೋವಿಂದ ಗೋವಿಂದ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  'ಹುಂಡಿ ನಮ್ದು, ಕಾಸು ನಿಮ್ದು' ಈ ಸಿನಿಮಾದ ಟ್ಯಾಗ್‌ಲೈನ್‌. ಚಿತ್ರದಲ್ಲಿ ಸುಮಂತ್‌ ಕಾಲೇಜ್‌ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಸುಮಂತ್ ಶೈಲೇಂದ್ರ (Sumanth Shailendra) ನಟಿಸಿರುವ ಕಾಮಿಡಿ ಥಿಲ್ಲರ್ ಕಥಾಹಂದರ ಇರುವ 'ಗೋವಿಂದ ಗೋವಿಂದ' (Govinda Govinda) ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಹುಂಡಿ ನಮ್ದು, ಕಾಸು ನಿಮ್ದು' ಈ ಸಿನಿಮಾದ ಟ್ಯಾಗ್‌ಲೈನ್‌. ಚಿತ್ರದಲ್ಲಿ ಸುಮಂತ್‌ ಕಾಲೇಜ್‌ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕವಿತಾ ಗೌಡ (Kavitha Gowda) ಹಾಗೂ ಭಾವನಾ ಮೆನನ್‌ (Bhavana Menon) ನಾಯಕಿಯರು. ಹಲವು ಧಾರಾವಾಹಿಗಳಿಗೆ ಆ್ಯಕ್ಷನ್‌ ಕಟ್ ಹೇಳಿದ್ದ ತಿಲಕ್, ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಮತ್ತೋರ್ವ ನಾಯಕನಾಗಿ ತುಳು ಸಿನಿಮಾ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ನಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Govinda Govinda: ನಟ ಸುಮಂತ್ ಶೈಲೇಂದ್ರ ಹೊಸ ಸಿನಿಮಾ ನ.26ಕ್ಕೆ ರಿಲೀಸ್

ಈಗಾಗಲೇ ಹಿರಿತೆರೆಯಲ್ಲಿ ಹಲವು ಹಿಟ್‌ ಚಿತ್ರಗಳನ್ನು ನೀಡಿರುವ ಶೈಲೇಂದ್ರ ಬಾಬು, ಕಿರುತೆರೆಯಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರವಿ ಆರ್‌ ಗರಣಿ (Ravi.R.Garani) ಹಾಗೂ ಕಿಶೋರ್‌ ಮಧುಗಿರಿ (Kishor Madhugiri) ಈ ಚಿತ್ರ ನಿರ್ಮಿಸಿದ್ದಾರೆ. ಕೆ ಎಸ್‌ ಚಂದ್ರಶೇಖರ್‌ ಛಾಯಾಗ್ರಹಣ, ಹಿತನ್‌ ಹಾಸನ್‌ ಸಂಗೀತ, ದೇವ್‌ ರಂಗಭೂಮಿ ಸಂಭಾಷಣೆ, ಕುಮಾರ್‌ ಸಿನಿಮಾಟೋಗ್ರಾಫಿ ಈ ಚಿತ್ರಕ್ಕಿದೆ. ವಿಜಯಪುರ, ಮಧುಗಿರಿ, ಚಿಂತಾಮಣಿ, ಬೆಂಗಳೂರು ಮುಂತಾದ ಕಡೆ 60ಕ್ಕೂ ಹೆಚ್ಚು ದಿನ ಚಿತ್ರೀಕರಣ ಮಾಡಲಾಗಿದ್ದು, ಪ್ರದೀಪ್‌ ರಾಜ್‌, ಅಚ್ಯುತ್‌ ಕುಮಾರ್‌, ಶೋಭರಾಜ್‌, ವಿ. ಮನೋಹರ್‌, ಪವನ್‌, ವಿಜಯ್‌ಚೆಂಡೂರ್‌ ಸೇರಿದಂತೆ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video