Arjun Gowda: ವರ್ಷಾಂತ್ಯಕ್ಕೆ ತೆರೆಮೇಲೆ ಬರಲಿದ್ದಾನೆ ಡೈನಾಮಿಕ್ ಪ್ರಿನ್ಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಹೀಗಾಗಿ ಇಡೀ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಟಿಯನ್ನು ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಹೀಗಾಗಿ ಇಡೀ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಟಿಯನ್ನು ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್‌ಲುಕ್, ಟೀಸರ್, ಹಾಗೂ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ಗಮನ ಸೆಳೆದಿದೆ. ಆ್ಯಕ್ಷನ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದ ರಾಮು ಫಿಲಂಸ್ ಸಂಸ್ಥೆಯ ಕೋಟಿ ನಿರ್ಮಾಪಕ ಎಂದೇ ಹೆಸರುವಾಸಿಯಾದ ರಾಮು (Ramu) ಅವರು ಬಂಡವಾಳ ಹೂಡಿದ್ದಾರೆ.

Add Asianetnews Kannada as a Preferred SourcegooglePreferred

Udho Udho Huligemma: ರಾಣಾ ಚಿತ್ರದ ಹಾಡನ್ನು ರಿಲೀಸ್ ಮಾಡಿದ ಧ್ರುವ ಸರ್ಜಾ

ನಿರ್ದೇಶಕ ಶಂಕರ್ (Shankar) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಲಾಕ್​ಡೌನ್​ ಆಗದೆ ಹೋಗಿದ್ದರೆ ಈ ಚಿತ್ರ ಏಪ್ರಿಲ್​​ನಲ್ಲಿ ಬಿಡುಗಡೆಯಾಗಬೇಕಿತ್ತು. ಅಲ್ಲದೇ ಚಿತ್ರದ ನಿರ್ಮಾಪಕರಾದ ರಾಮು ಅವರು ಕೊರೊನಾಗೆ ಬಲಿಯಾಗಿದ್ದರಿಂದ ಸಿನಿಮಾದ ಬಿಡುಗಡೆಗೆ ತಡವಾಯಿತು. ಹಾಗಾಗಿ ರಾಮು ಪತ್ನಿ ಮಾಲಾಶ್ರೀ (Malashree) ಇದೀಗ ಪತಿಯ ಕನಸನ್ನು ನನಸು ಮಾಡುತ್ತಿದ್ದಾರೆ. ರಾಮು ನಿರ್ಮಾಣ ಮಾಡಿದ ಕೊನೇ ಸಿನಿಮಾ ತೆರೆ ಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದು, ವರ್ಷಾಂತ್ಯಕ್ಕೆ 'ಅರ್ಜುನ್​ ಗೌಡ' ಚಿತ್ರ ಬಿಡುಗಡೆಯಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video