ಶ್ರೀಲೀಲಾಗೆ ಶ್ರೀರಸ್ತು ಎಂದ ಟಿಟೌನ್ ಮಂದಿ: ಪೂಜಾ ಹೆಗ್ಡೆಗೆ ಉರಿ ಉರಿ ಹೊಟ್ಟೆ ಉರಿ ಶುರು!
ಶ್ರೀಲೀಲಾ ಸಕ್ಸಸ್, ಪೂಜಾ ಹೆಗ್ಡೆಗೆ ಹೊಟ್ಟೆ ಕಿಚ್ಚು!
ಪೂಜಾ ಹೆಗ್ಡೆನೆ ಸೈಲೆಂಟ್ ಶ್ರೀಲೀಲಾ ಭರಾಟೆ
ತೆಲುಗಿನಲ್ಲಿ ಕನ್ನಡತಿಯ ಸಕ್ಸಸ್ ಫುಲ್ ಜರ್ನಿ!
ಹೊಸ ನೀರು ಬಂದ್ಮೇಲೆ ಹಳೇ ಬೇರು ಕೊಚ್ಚಿಕೊಂಡು ಹೋಗೋದು ಜಗದ ನಿಯಮ. ಬಣ್ಣದ ಜಗತ್ತಲ್ಲಿ ಇದು ಸ್ವಲ್ಪ ಹೆಚ್ಚಾಗೇ ಇರುತ್ತೆ. ಅದರಲ್ಲೂ ಹೀರೋಯಿನ್ ವಿಷಯಕ್ಕೆ ಬಂದ್ರಂತು ವರ್ಷಕ್ಕೊಬ್ಬರು ಹೊಸ ನಾಯಕಿಯರು ಚಿತ್ರರಂಗಲ್ಲಿ ಮಿಂಚಿ ಮೆರೆದಾಡ್ತಾರೆ. ಒಂದಿಷ್ಟು ಸಮಯ ಸಕ್ಸಸ್ ಫುಲ್ ಹಾದಿಯಲ್ಲೂ ಇರ್ತಾರೆ. ಅಕ್ಕ-ಪಕ್ಕದ ಚಿತ್ರರಂಗಕ್ಕೂ ಹೋಗಿ ಹೆಸರು ಕೀರ್ತಿ ಸಂಪಾದಿಸುತ್ತಾರೆ. ಇದೀಗ ಟಾಲಿವುಡ್ ಜಗತ್ತಲ್ಲಿ ನಮ್ಮ ಕನ್ನಡತಿ ಕಿಸ್ ಚೆಲುವೆ ಶ್ರೀಲೀಲಾ ಮಿಂಚುತ್ತಿದ್ದಾರೆ. ಯಾವ್ ಮಟ್ಟಕ್ಕೆ ಅಂದ್ರೆ ಶ್ರೀಲೀಲಾ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ತೆಲುಗು ಮಂದಿ ಶ್ರೀಲೀಲಾಗೆ ಶ್ರೀರಸ್ತು ಎಂದಿದ್ದಾರೆ. ಇದನ್ನೆಲ್ಲಾ ನೋಡಿ ಪೂಜಾ ಹೆಗ್ಡೆಗೆ ಉರಿ ಉರಿ ಹೊಟ್ಟೆ ಉರಿ ಶುರುವಾಗಿದೆಯಂತೆ.
ಇದನ್ನೂ ವೀಕ್ಷಿಸಿ: ಫಾರಿನ್ ಪ್ರಯಾಣದಲ್ಲಿ ಮೋಹಕ ತಾರೆ : ಸೌಂದರ್ಯ ಚಿಕಿತ್ಸೆಗಾಗಿ ಕ್ವೀನ್ ರಮ್ಯಾ ಲಂಡನ್ ಪ್ರಯಾಣ!