ಫಾರಿನ್ ಪ್ರಯಾಣದಲ್ಲಿ ಮೋಹಕ ತಾರೆ : ಸೌಂದರ್ಯ ಚಿಕಿತ್ಸೆಗಾಗಿ ಕ್ವೀನ್ ರಮ್ಯಾ ಲಂಡನ್ ಪ್ರಯಾಣ!

ಲಂಡನ್ ಫ್ಲೈಟ್ ಹತ್ತಿದ ಸ್ಯಾಂಡಲ್ವುಡ್ ಕ್ವೀನ್!
ಪದ್ಮಾವತಿ ಏಕಾಏಕಿ ಫಾರಿನ್ ಪ್ರಯಾಣ ಮಾಡಿದ್ದೇಕೆ?
ಸೌಂದರ್ಯದ ಮೇಲೆ ಕ್ವೀನ್ ರಮ್ಯಾ ಸಿಕ್ಕಾಪಟ್ಟೆ ಕೇರ್!

First Published Jun 21, 2023, 3:16 PM IST | Last Updated Jun 21, 2023, 3:16 PM IST

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ  ಏಕಾಏಕಿ ಫಾರಿನ್ ಪ್ರಯಾಣ ಮಾಡಿದ್ದಾರೆ. ರಮ್ಯಾ  ಲಂಡನ್‌ಗೆ ಫ್ಲೈಟ್ ಹತ್ತಿದ್ದಾರೆ. ಅಯ್ಯೋ, ಅದರಲ್ಲೇನು ಸ್ಪೇಷಲ್‌. ರಮ್ಯಾ ಈ ಹಿಂದೆ ಅಲ್ಲಿಯೇ ಗುಟ್ಟಾಗಿ ವರ್ಷಗಟ್ಟಲೇ ಇದ್ರಲ್ಲ ಅನ್ನಬಹುದು. ಆದ್ರೆ ಕ್ವೀನ್ ರಮ್ಯಾ ಈ ಭಾರಿ ದಿಢೀರ್ ಅಂತ ಲಂಡನ್ ಗೆ ಹಾರಲು ಕಾರಣವೂ ಇದೆ. ಕನ್ನಡ ಸಿನಿ ಪ್ರೇಕ್ಷಕರ ಮೋಹಕ ತಾರೆ. ಈಕೆಯ ಚೆಲುವಿನ ಮೋಹಕ್ಕೆ ಮರುಳಾಗ ಗಂಡ್ ಹೈಕ್ಳೆ ಇಲ್ಲ. ರಮ್ಯಾ ತನ್ನ ಸೌಂದರ್ಯ ಕಾಪಾಡಿಕೊಳ್ಳೋಕೆ ಈಗ ಫಾರಿನ್‌ಗೆ ಹಾರಿದ್ದಾರೆ. ಈಗ ಮತ್ತೆ ಕನ್ನಡ ಚಿತ್ರರಂಗದಲ್ಲಿ ಆಕ್ಟೀವ್ ಆಗಿರೋ ರಮ್ಯಾ ಹೀರೋಯಿನ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದಕ್ಕಾಗಿ ರಮ್ಯಾ ಹಳೇ ಚಾರ್ಮ್ಗೆ ಮರಳಬೇಕಿದೆ. ಹೀಗಾಗಿ ರಿಲ್ಯಾಕ್ಸ್ ಆಗಿ ಸ್ಲಿಮ್ ಆಗೋಕೆ ನೈಸರ್ಗಿಕ ಚಿಕಿತ್ಸೆ ಪಡೆಯಲು ಲಂಡನ್‌ ಹೋಗಿದ್ದಾರೆ.

ಇದನ್ನೂ ವೀಕ್ಷಿಸಿ: ಬಿಬಿಎಂಪಿ ಚೀಫ್‌ ಇಂಜಿನಿಯರ್‌ ಕರ್ಮಕಾಂಡ: ರಾಜಕಾಲುವೆಯೇ ಗುಳುಂ?