ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಹಬ್ಬಕ್ಕೆ ತೆರೆ: ಗಂಧದಗುಡಿ ಕಪ್ ಗೆದ್ದ ಗೋಲ್ಡನ್ ಸ್ಟಾರ್ ಗ್ಯಾಂಗ್!

ಕಳೆದ ಮೂರು ದಿನ ಸ್ಯಾಂಡಲ್ವುಡ್ ಸಿನಿ ರಂಗ ಕ್ರಿಕೆಟ್ ಹಬ್ಬ ಮಾಡಿದೆ. ಕಿಚ್ಚ ಸುದೀಪ್ ಹಾಗು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್, ಗಣೇಶ್, ಉಪೇಂದ್ರ ಸಾರಥ್ಯದಲ್ಲಿ ಒಟ್ಟು ಆರು ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಆಗಿ ಸಂಭ್ರಮಿಸಿದ್ರು.

Share this Video
  • FB
  • Linkdin
  • Whatsapp

ಕಳೆದ ಮೂರು ದಿನ ಸ್ಯಾಂಡಲ್ವುಡ್ ಸಿನಿ ರಂಗ ಕ್ರಿಕೆಟ್ ಹಬ್ಬ ಮಾಡಿದೆ. ಕಿಚ್ಚ ಸುದೀಪ್ ಹಾಗು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್, ಗಣೇಶ್, ಉಪೇಂದ್ರ ಸಾರಥ್ಯದಲ್ಲಿ ಒಟ್ಟು ಆರು ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಆಗಿ ಸಂಭ್ರಮಿಸಿದ್ರು. ಈ ಭಾರಿಯ ಕೆಸಿಸಿ ಸೀಸನ್ 4ರಲ್ಲಿ ಫೈನಲ್ಗೆ ತಲುಪಿದ್ದು ಡಾಕ್ಟರ್ ಶಿವರಾಜ್ ಕುಮಾರ್ ರ ಬಲಿಷ್ಠ ರಾಷ್ಟ್ರಕೂಡ ಫ್ಯಾಂಥರ್ಸ್ ತಂಡ ಹಾಗು ನಟ ಗೋಲ್ಡನ್ ಸ್ಟಾರ ಗಣೇಶ್ರ ಗಂಗಾ ವಾರಿಯರ್ಸ್ ಟೀಂ. 

Add Asianetnews Kannada as a Preferred SourcegooglePreferred

ಫೈನಲ್ನಲ್ಲಿ ರೋಚಕ ಹಣಾ ಹಣಿ ನಡೆಸಿದ ಶಿವಣ್ಣನ ರಾಷ್ಟ್ರಕೂಟ ಫ್ಯಾಂಥರ್ಸ್ ತಂಡ 3 ರನ್ಗಳಿಂದ ಸೋಲುಂಡ್ರು. ಗಣೇಶ್ ತಂಡ ಕೆಸಿಸಿ ಕಪ್ ಎತ್ತಿ ಸಂಭ್ರಮಿಸಿದ್ರು. ಭಾರತೀಯ ಚಿತ್ರರಂಗದ ಬಾದ್ಷಾ ಕಿಚ್ಚ ಸುದೀಪ್ ಹುಟ್ಟುಹಾಕಿರೋ ಕೆಸಿಸಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ನಡೆಯೋದೇ ಸ್ಯಾಂಡಲ್ವುಡ್ ಒಟ್ಟಿಗೆ ಸೇರಲು. ಈ ಅದ್ಭುತ ದೃಶ್ಯಕ್ಕೆ ಈ ಭಾರಿಯ ಕೆಸಿಸಿ ಟೂರ್ನಿ ಸಾಕ್ಷಿ ಆಗಿತ್ತು. ಕೆಸಿಸಿಯ ಫೈನಲ್ ಪಂದ್ಯ ನೋಡೋಕೆ ಕನ್ನಡ ಚಿತ್ರರಂಗದ ಸ್ಟಾರ್ಗಳ ದಂದೇ ಬಂದಿತ್ತು. ಇವರೆಲ್ಲಾ ತಮ್ಮ ಕೋ ಸ್ಟಾರ್ಸ್ ಆಡೋ ಕ್ರಿಕೆಟ್ ನೋಡಿ ಎಂಜಾಯ್ ಮಾಡಿದ್ರು. ಈ ಮೂಲಕ ಕಿಚ್ಚನ ಕನಸು ಕೆಸಿಸಿ ಸೀಸನ್ 4ಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ.

Related Video