
Yuva Rajkumar: A-Z ಅಕ್ಷರದವರೆಗೂ ರೌಡಿಗಳ ಮ್ಯಾಟರ್ ಹೇಳಿದ ಯುವ ರಾಜ್‌ಕುಮಾರ್ Ekka Movie Song!
ಯುವರಾಜ್ಕುಮಾರ್ ನಟನೆಯ ಎಕ್ಕ ಸಿನಿಮಾ ತನ್ನ ಕಂಟೆಂಟ್ ಹಾಗೂ ಹಾಡುಗಳ ಮೂಲಕ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಎಕ್ಕ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಬ್ಯಾಂಗಲ್ ಬಂಗಾರಿ ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಇದೀಗ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ.
ರೌಡಿ ರೈಮ್ಸ್ ಎಂಬ ಈ ಸಾಂಗ್ ಸದ್ಯ ಭರ್ಜರಿ ಸೌಂಡ್ ಮಾಡ್ತಾ ಇದೆ. ಈ ಹಾಡಿನಲ್ಲಿ ರೌಡಿಗಳ ಚಿತ್ರಣವೇ ಇದ್ದು, ಇದರಲ್ಲಿ A to Z ವಿಷಯ ಇದೆ. ಅಂದ್ರೆ A ಅಕ್ಷರದಿಂದ Z ಅಕ್ಷರದ ವರೆಗೂ ರೌಡಿಗಳ ಮ್ಯಾಟರ್ ಅನ್ನ ಇಲ್ಲಿ ಮಜವಾಗಿಯೇ ಹೇಳಲಾಗಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಒನ್ಸ್ ಅಗೈನ್ ಟ್ರೆಂಡಿ ಟ್ಯೂನ್ ಕೊಟ್ಟಿದ್ದಾರೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರವನ್ನ ಭಾರಿ ಅದ್ಧೂರಿಯಾಗಿ ಮಾಡಲು ಯೋಜಿಸಲಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಎರಡು ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರಂತೆ. ಜುಲೈ 19 ರಂದು ತಿರುಪತಿಯಲ್ಲಿ ಪ್ರೀ ಲಾಂಚ್ ಇವೆಂಟ್ ನಡೆಯಲಿದೆ ಅದ್ರಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಭಾಗಿಯಾಗಲಿದ್ದಾರೆ.. ಜೊತೆಗೆ ವಾರಣಾಸಿಯಲ್ಲಿ ಕೂಡ ಇವೆಂಟ್ ಪ್ಲಾನ್ ಮಾಡಿದ್ದು, ಜುಲೈ 17 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿ ಆಗಲಿದ್ದಾರಂತೆ. ಯೋಗಿ ಆದಿತ್ಯನಾಥ್ ಜೊತೆ ಪವನ್ ಕಲ್ಯಾಣ್ ವೇದಿಕೆ ಹಂಚಿಕೊಳ್ಳಲಿದ್ದಾರೆ.