ಮುಹೂರ್ತಕ್ಕೂ ಮುನ್ನವೇ ದಾಖಲೆ ಬರೆದ ದುನಿಯಾ ವಿಜಯ್‌ 'ಭೀಮ'

ಇದೀಗ ದುನಿಯಾ ವಿಜಯ್ ತನ್ನ ಸಿನಿ ಜೀವನದಲ್ಲೇ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ. ವಿಜಯ್ ರ ಹೊಸ‌ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಶೂಟಿಂಗ್ ಕೂಡ ಶುರುವಾಗಿಲ್ಲ. ಆದ್ರೆ ವಿಜಯ್ ಹೊಸ ಸಿನಿಮಾದ ಆಡಿಯೋ ಹಕ್ಕು 1.50 ಕೋಟಿಗೆ ಸೇಲ್ ಆಗಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಕೊರಳಿಗೆ ಹೋದಲ್ಲೆಲ್ಲಾ ವಿಜಯದ ಮಾಲೆ ಬೀಳುತ್ತಿದೆ. ಚಿತ್ರರಂಗದಲ್ಲಿ ವಿಜಯ್ ಇನ್ನೇನು ಕಳದೇ ಹೋದ್ರು ಅಂತ ವಿಜಯ್ ಬಗ್ಗೆ ಮಾತನಾಡುತ್ತಿದ್ರು. ಆದ್ರೆ ಸ್ಯಾಂಡಲ್ ವುಡ್ ದುನಿಯಾದ ಹುಡುಗ ಸಲಗ ಸಿನಿಮಾದಿಂದ ಫಿನಿಕ್ಸ್ ನಂತೆ ಎದ್ದು ಬಂದು ವಿಜಯ್ ಭವಿಷ್ಯ ಮುಗೀತು ಅನ್ನುತ್ತಿದ್ದವರಿಗೆ ಮುಟ್ಟಿಕೊಳ್ಳೋ ಹಾಗೆ ಉತ್ತರ ಕೊಟ್ಟಿದ್ರು‌. 

Add Asianetnews Kannada as a Preferred SourcegooglePreferred

ದಾಖಲೆಯ ಮೊತ್ತಕ್ಕೆ ಕೆಜಿಎಫ್ 2 ಪ್ರಿ ರಿಲೀಸ್ ಟಿಕೆಟ್ ಮಾರಾಟ: ಅಬ್ಬರಕ್ಕೆ ದಂಗಾದ ಬಿಟೌನ್

 ಇದೀಗ ದುನಿಯಾ ವಿಜಯ್ ತನ್ನ ಸಿನಿ ಜೀವನದಲ್ಲೇ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ. ವಿಜಯ್ ರ ಹೊಸ‌ ಸಿನಿಮಾ ಇನ್ನೂ ಸೆಟ್ಟೇರಿಲ್ಲ ಶೂಟಿಂಗ್ ಕೂಡ ಶುರುವಾಗಿಲ್ಲ. ಆದ್ರೆ ವಿಜಯ್ ಹೊಸ ಸಿನಿಮಾದ ಆಡಿಯೋ ಹಕ್ಕು 1.50 ಕೋಟಿಗೆ ಸೇಲ್ ಆಗಿದೆ. ದುನಿಯಾ ವಿಜಯ್ ನಾಯಕನಾಗಿ ನಟಿಸೋದರ ಜೊತೆಗೆ ನಿರ್ದೇಶನ ಮಾಡುತ್ತಿರೋ ಸಿನಿಮಾ ಭೀಮ.

ಸಧ್ಯ ಟಾಲಿವುಡ್ ನಲ್ಲಿ ಬಾಲಯ್ಯನ‌ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುತ್ತಿದ್ದು, ಈ ಮಧ್ಯೆ ತಮ್ಮ ಮತ್ತೊಂದು ಕನಸು ಭೀಮ ಸಿನಿಮಾದ ಸ್ಕ್ರಿಪ್ಟ್ ಕೆಲಸವನ್ನೂ ಮಾಡುತ್ತಿದ್ದಾರೆ. ಸಲಗ ಚಿತ್ರಕ್ಕೆ ಮ್ಯೂಸಿಕ್ ಮಾಡದ್ದ ಚರಣ್ ರಾಜ್ ಭೀಮ ಸಿನಿಮಾಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ. ಭೀಮ ಸಿನಿಮಾವನ್ನ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ನಿರ್ಮಾಣ ಮಾಡುತ್ತಿದ್ದು, ಚಿತ್ರೀಕರಣಕ್ಕೂ‌ ಮೊದ್ಲೇ ವಿಜಯ್ ಭೀಮ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ. ಇದೇ ಏಪ್ರಿಲ್ 18ಕ್ಕೆ ಭೀಮ ಚಿತ್ರ ಅದ್ಧೂರಿ ಮುಹೂರ್ತ ನಡೆಯಲಿದೆ.

Related Video