Asianet Suvarna News Asianet Suvarna News
breaking news image

ಹೆಂಡ್ತಿ 5 ತಿಂಗಳ ಗರ್ಭಿಣಿ ಸಾರ್ ಬಿಟ್ಟು ಬಿಡಿ, ಬೇಡಿದರೂ ಬಿಡದ ಕಟುಕರ ಡಿ ಗ್ಯಾಂಗ್!

ಪರಿಪರಿಯಾಗಿ ಬೇಡಿದರೂ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಕಟುಕರ ಡಿ ಗ್ಯಾಂಗ್, ಬಡಪಾಯಿ ಕೊಲ್ಲಲು 17 ಜನ, ಕಟುಕರ ಡಿ ಗ್ಯಾಂಗ್ ಮಹಾ ಸಂಚು ಬಯಲು, ರೇಣುಕಾಸ್ವಾಮಿ ಹತ್ಯೆಗೈದು ಸ್ಕಾರ್ಪಿಯೋ ವಾಹನದಲ್ಲಿ ಸಾಗಾಟ ಮಾಡಿದ ಡಿ ಗ್ಯಾಂಗ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ನಟ ದರ್ಶನ್ ಗ್ಯಾಂಗ್ ನಡೆಸಿದ ಕೊಲೆ ಪ್ರಕರಣದ ಮನಕಲುಕುವ ಘಟನೆ ಬಹಿರಂಗವಾಗಿದೆ. ಸಾರ್ ನನ್ನ ಹೆಂಡ್ತಿ 5 ತಿಂಗಳ ಗರ್ಭಿಣಿ, ಬಿಟ್ಟು ಬಿಡಿ ಸಾರ್, ಮನೆಗೆ ಹೋಗಬೇಕು ಎಂದು ಕೊಲೆಯಾದ ರೇಣುಕಾಸ್ವಾಮಿ ಪರಿಪರಿಯಾಗಿ ಬೇಡಿದರೂ ಕಟುಕರ ಡಿ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಲೆ ಮಾಡಿತ್ತು. ಶೆಡ್‌ನಲ್ಲಿ ಕೂಡಿ ಹಾಕಿ ಬರೋಬ್ಬರಿ 17 ಮಂದಿ ಸವಾರಿ ಮಾಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಭಯಾನಕ ಮಾಹಿತಿ ಬಹಿರಂಗವಾಗಿದೆ. ಇತ್ತ ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್ ಕೇಸ್ ಮುಚ್ಚಿ ಹಾಕಲು ಪ್ಲಾನ್ ಮಾಡಿದ ಮಾಹಿತಿಯೂ ಬಹಿರಂಗವಾಗಿದೆ. ನಾಲ್ವರನ್ನು ಶರಣಾಗಲು ಹೇಳಿ ಪ್ರತಿಯೊಬ್ಬರಿಗೆ ತಲಾ 30 ಲಕ್ಷ ರೂಪಾಯಿ ಆಫರ್ ನೀಡಿದ್ದ ಮಾಹಿತಿಯೂ ಬಹಿರಂಗವಾಗಿದೆ. ದರ್ಶನ್ ಗ್ಯಾಂಗ್ ನಡೆಸಿದ ಕೊಲೆ ಪ್ರಕರಣದ ಇಂಚಿಂಚು ಮಾಹಿತಿ ಇಲ್ಲಿದೆ.
 

Video Top Stories