ಉಡುಪಿಯಲ್ಲಿ ಜ್ಯೂ. ರಿಷಬ್ ಶೆಟ್ಟಿ: ಇವರು ನೋಡೋದಕ್ಕೆ ಸೇಮ್ 'ಕಾಂತಾರ' ಶಿವು

ಕಾಂತಾರ ಸಿನಿಮಾ ಸಕ್ಸಸ್ ನಂತರ ರಿಷಬ್ ಶೆಟ್ಟಿ ತುಂಬಾ ಫೇಮಸ್ ಆಗಿದ್ದಾರೆ. ಇದೀಗ ಅವರನ್ನೇ ಹೋಲುವ ಜ್ಯೂ. ರಿಷಬ್ ಶೆಟ್ಟಿ ಹುಟ್ಟಿಕೊಂಡಿದ್ದಾರೆ. 
 

Share this Video
  • FB
  • Linkdin
  • Whatsapp

ಉಡುಪಿ ಜಿಲ್ಲೆಯ ಶಿರ್ವ ಗ್ರಾಮದಲ್ಲಿ ಮೊಬೈಲ್ ಶಾಪ್'ನಲ್ಲಿ ಕೆಲಸ ಮಾಡುವ ಪ್ರದೀಪ್ ಆಚಾರ್ಯ ಅವರೇ ಜ್ಯೂ. ರಿಷಬ್ ಶೆಟ್ಟಿ. ಗುಂಗುರು ಕೂದಲು, ಕಣ್ಣಿಗೆ ಕನ್ನಡಕ, ಶರ್ಟ್, ಪಂಚೆ ಜೊತೆಗೆ ಕಾಂತಾರ ಶಿವ ಓಡಿಸೋ RX ಬೈಕ್ ಏರಿ ಬಂದ್ರೆ ನೋಡೋಕೆ ಸೇಮ್ ಟು ಸೇಮ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯೇ. ಅಷ್ಟೆ ಅಲ್ಲ ನಡಿಯೋ ಸ್ಟೈಲ್, ಮಾತಾಡುವಾಗ ಇರೋ ಎಕ್ಸ್ಪ್ರೆಷನ್ ಎಲ್ಲವೂ ರಿಷಬ್ ರೀತಿಯೇ ಇದೆ. ಮೊಬೈಲ್ ಶಾಪ್‌'ಗೆ ಬಂದವರು ರಿಷಬ್ ತರ ಕಾಣ್ತೀರಿ ಅಂತ ಹೇಳಿದ್ರಂತೆ. ಬಳಿಕವೇ ಅವರು ಕನ್ನಡಿ ಮುಂದೆ ನಿಂತಾಗ ಪ್ರದೀಪ್'ಗೂ ತಾನು ರಿಷಬ್ ಥರ ಕಾಣ್ತಿನಿ ಅಂತ ಗೊತ್ತಾಗಿದೆ. ಒಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾಗೆ ಬಿಟ್ಟಿದ್ದೇ ತಡ ಜ್ಯೂನಿಯರ್ ರಿಷಬ್'ಗೆ ಭಾರೀ ಡಿಮ್ಯಾಂಡ್ ಸಿಕ್ಕಿದೆ. ಈ ಕಥೆಯನ್ನು ಅವರೇ ಹೇಳಿಕೊಂಡಿದ್ದಾರೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ, ಇಶಾ… ಅವಳಿ ಗರ್ಭಧಾರಣೆ ಟೈಮಲ್ಲಿ ಇದನ್ನ ಮಾಡ್ಬೇಡಿ

Related Video