ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ, ಇಶಾ… ಅವಳಿ ಗರ್ಭಧಾರಣೆ ಟೈಮಲ್ಲಿ ಇದನ್ನ ಮಾಡ್ಬೇಡಿ
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅಜ್ಜ-ಅಜ್ಜಿಯಾಗಿರೋ ವಿಷ್ಯ ನಿಮಗೆ ಗೊತ್ತಿದೆ ಅಲ್ವಾ?. ಅವರ ಮಗಳು ಇಶಾ ಅಂಬಾನಿ ನವೆಂಬರ್ 19 ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅಷ್ಟೇ ಅಲ್ಲ ನಮ್ಮ ಸ್ಯಾಂಡಲ್ ವುಡ್ ಬ್ಯೂಟಿ ಅಮೂಲ್ಯ ಅವರು ಕೂಡ ಕೆಲವು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವಳಿ ಮಕ್ಕಳು ನೋಡಲು ಚೆನ್ನಾಗಿರುತ್ತೆ. ಆದರೆ ಈ ಸಮಯದಲ್ಲಿ ಮಹಿಳೆಯರ ಆರೋಗ್ಯ ಹೇಗಿರುತ್ತೆ? ಇಂದು ನಾವು ಅವಳಿ ಗರ್ಭಧಾರಣೆಯ ಸಮಯದಲ್ಲಿ ಯಾವ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಅನ್ನೋ ಮಾಹಿತಿ ನೀಡುತ್ತೇವೆ. ಇದರಿಂದ ಯಾವುದೇ ಸಮಸ್ಯೆಗಳು ಉಂಟಾಗೋದಿಲ್ಲ..

ಪೋಷಕರಾಗುವುದು ಪ್ರತಿಯೊಬ್ಬರ ಕನಸು. ಆ ಕ್ಷಣ ಎಷ್ಟು ಖುಶಿ ತರುತ್ತೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ತಾಯಿ ಒಟ್ಟಿಗೆ ಇಬ್ಬರು ಮಕ್ಕಳಿಗೆ ಜನ್ಮ ನೀಡಿದಾಗ ಈ ಸಂತೋಷ ದ್ವಿಗುಣಗೊಳ್ಳೋದು ಖಚಿತ. ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮಗಳು ಇಶಾ ಅಂಬಾನಿ (Isha Ambani) ಕೂಡ ಇದೇ ರೀತಿಯ ಸಂತೋಷವನ್ನು ಅನುಭವಿಸಿದ್ದಾರೆ. ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರು ಸಹ ಇಬ್ಬರು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮಕ್ಕಳೆಲ್ಲಾ ಆರೋಗ್ಯವಾಗಿದ್ದಾರೆ. ಆದರೆ ಈ ಅವಳಿ ಮಕ್ಕಳ ಗರ್ಭಧಾರಣೆ ಹೇಗಿರುತ್ತೆ ಅನ್ನೋ ಬಗ್ಗೆ ನಿಮಗೂ ಸಹ ಒಂದು ಕುತೂಹಲ ಇದ್ದೇ ಇರುತ್ತೆ ಅಲ್ವಾ? ಹಾಗಾಗಿ, ಇಂದು ನಾವು ಅವಳಿ ಗರ್ಭಧಾರಣೆಯ ಸಮಯದಲ್ಲಿ ನೀವು ಯಾವ ವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು ಅನ್ನೋದನ್ನು ಹೇಳುತ್ತೇವೆ.
ಅವಳಿ ಗರ್ಭಧಾರಣೆಯ ಸಮಯದಲ್ಲಿ ನೆನಪಿನಲ್ಲಿಡಬೇಕಾದ ವಿಷಯಗಳು
ಇದನ್ನಂತೂ ಮಾಡ್ಲೇಬೇಡಿ :
ಅವಳಿ ಗರ್ಭಧಾರಣೆ ಸಾಮಾನ್ಯ ಗರ್ಭಧಾರಣೆಗಳಿಗಿಂತ ತುಂಬಾನೆ ಕಷ್ಟ. ಆದ್ದರಿಂದ, ಈ ಸಮಯದಲ್ಲಿ ಗರ್ಭಿಣಿ ಮಹಿಳೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ಭಾರವಾದ ವಸ್ತುಗಳನ್ನು ಬಗ್ಗಿಸುವುದನ್ನು ಅಥವಾ ಎತ್ತುವುದನ್ನು (lifting heavy things) ಸಂಪೂರ್ಣವಾಗಿ ಅವಾಯ್ಡ್ ಮಾಡಬೇಕು, ಏಕೆಂದರೆ ಇದು ಗರ್ಭಾಶಯದ ಮೇಲೆ ಒತ್ತಡ ಹಾಕುತ್ತದೆ, ಇದರಿಂದಾಗಿ ಮಹಿಳೆಯರಿಗೆ ರಕ್ತಸ್ರಾವ ಅಥವಾ ಗರ್ಭಪಾತ ಉಂಟಾಗೋ ಸಾಧ್ಯತೆ ಇದೆ.
ಯಾವ ರೀತಿ ಆಹಾರ ಸೇವಿಸಬೇಕು?
ಅವಳಿ ಗರ್ಭಧಾರಣೆ ಸಮಯದಲ್ಲಿ, ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಿಮ್ಮ ಗರ್ಭದಲ್ಲಿ ಇಬ್ಬರು ಮಕ್ಕಳು ಇರೋದರಿಂದ ನೀವು ಹೆಚ್ಚು ಆಹಾರವನ್ನು ಸೇವಿಸಬೇಕು. ನಿಮ್ಮ ಆಹಾರ ಕ್ರಮಕ್ಕೆ ಅನುಗುಣವಾಗಿ ನಿಮ್ಮ ವೈದ್ಯರ ಸಲಹೆಯೊಂದಿಗೆ ನಿಯಮಿತ ಮತ್ತು ಸಮತೋಲಿತ ಆಹಾರ (balanced food) ತೆಗೆದುಕೊಳ್ಳೋದು ಮುಖ್ಯ.
ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಮರೆಯೋದೆ ಬೇಡ
ಅವಳಿ ಗರ್ಭಧಾರಣೆ ಸಮಯದಲ್ಲಿ, ಗರ್ಭದಲ್ಲಿ 2 ಮಕ್ಕಳನ್ನು ಬೆಳೆಸುತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಮತ್ತು ಅದನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ (calcium and protein) ಸೇವಿಸೋದನ್ನು ಮಿಸ್ ಮಾಡ್ಲೇ ಬೇಡಿ. ಇದು ಮಕ್ಕಳ ಮೂಳೆಗಳನ್ನು ಬಲಪಡಿಸುತ್ತದೆ. ಅದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಹಾಲು, ಚೀಸ್, ಚೀಸ್, ಮೊಸರಿನಂತಹ ಡೈರಿ ಉತ್ಪನ್ನಗಳನ್ನು ಸೇವಿಸಬೇಕು.
ಯಾವ ಸೆಕ್ಸ್ ಪೊಸಿಷನ್ ಬೆಸ್ಟ್ ? (best sex position)
ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಜಾಗರೂಕರಾಗಿರಿ. ಮೊದಲ 3 ತಿಂಗಳು ಮತ್ತು ಕೊನೆಯ 3 ತಿಂಗಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಲೈಂಗಿಕ ಕ್ರಿಯೆ ನಡೆಸಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ, ಆದರೆ ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು, ಏಕೆಂದರೆ ಗರ್ಭಾಶಯಕ್ಕೆ ಡಿಕ್ಕಿ ಹೊಡೆದರೆ ಮಕ್ಕಳಿಗೆ ಗಾಯವಾಗುವ ಅಪಾಯವಿದೆ, ಆದ್ದರಿಂದ ಸೆಕ್ಸ್ ಮಾಡುವಾಗ ಪೊಸಿಶನ್ ಬಗ್ಗೆ ಗಮನ ಇರಲಿ. ಇದಕ್ಕಾಗಿ ನೀವು ನಿಮ್ಮ ವೈದ್ಯರನ್ನು ಸಹ ಸಂಪರ್ಕಿಸಬಹುದು.
ಅವಳಿ ಗರ್ಭಧಾರಣೆಯ ಸಮಸ್ಯೆಗಳು
ಅವಳಿ ಮಕ್ಕಳಿಗೆ ಜನ್ಮ ನೀಡುವಾಗ ತಾಯಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಉದಾಹರಣೆಗೆ, ಸಾಮಾನ್ಯ ಗರ್ಭಧಾರಣೆಗಳಿಗೆ (normal pregnancy) ಹೋಲಿಸಿದರೆ ಅವಳಿ ಗರ್ಭಧಾರಣೆಯ ಸಮಯದಲ್ಲಿ ಮಾರ್ನಿಂಗ್ ಸಿಕ್ ನೆಸ್ ಬಹಳಷ್ಟು ಹೆಚ್ಚಾಗುತ್ತದೆ. ಹಾಗಾಗಿ, ನೀವು ಬೆಳಿಗ್ಗೆ ತಾಜಾ ಗಾಳಿಯನ್ನು ತೆಗೆದುಕೊಳ್ಳಬೇಕು ಮತ್ತು ಆರಾಮವಾಗಿ ಎದ್ದೇಳಬೇಕು..
ಅವಳಿ ಗರ್ಭಧಾರಣೆಯ ಸಮಯದಲ್ಲಿ ಮಧುಮೇಹ *diabetes) ಮತ್ತು ಪ್ರಿಕ್ಲಾಪ್ಸಿಯಾದ ಅಪಾಯವೂ ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೇ, ಈ ಸಮಯದಲ್ಲಿ ಸ್ತನ ಕೋಮಲತೆ ಮತ್ತು ತೂಕ ಹೆಚ್ಚಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಉಂಟಾಗಬಹುದು. ಆದ್ದರಿಂದ ತಾಯಿ ಸಾಧ್ಯವಾದಷ್ಟು ತನ್ನನ್ನು ತಾನು ನೋಡಿಕೊಳ್ಳಬೇಕು.
ಅವಳಿ ಗರ್ಭಧಾರಣೆಯ ಸಮಯದಲ್ಲಿ, ಅಕಾಲಿಕ ಹೆರಿಗೆ ಅಪಾಯ ಹೆಚ್ಚಾಗಿರುತ್ತೆ. ಏಕೆಂದರೆ ಕೆಲವೊಮ್ಮೆ 40 ರ ಬದಲು 36 ಅಥವಾ 37 ವಾರಗಳಲ್ಲಿ ಹೆರಿಗೆಯಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಕಳೆದ ಎರಡು ಮೂರು ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ತಾಯಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.