ಕನ್ನಡ ನಟಿಗೆ ಲೆನ್ಸ್‌ನಿಂದ ಕಣ್ಣೇ ಹೋಯ್ತಾ..? ಕೋಮಲ್ ಹೀರೋಯಿನ್ ಜಾಸ್ಮಿನ್ ಕಣ್ಣಿಗೆ ಏನಾಯ್ತು..?

ಕಂಟ್ಯಾಖ್ಟ್ ಲೆನ್ಸ್ ಬಳಸಿದ್ದರಿಂದ ಕಣ್ಣನ್ನೆ ಕಳೆದುಕೊಂಡ್ರಾ ಕನ್ನಡದ ಈ ನಟಿ..? ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಿದೆ. ಕ ನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಜಾಸ್ಮಿನ್ ಭಾಸಿನ್ ಅವರು ಈಗ ಈ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಸ್ವತಃ ಈ ಬಗ್ಗೆ ಜಾಸ್ಮಿನ್ ಭಾಸಿನ್ (Jasmin Bhasin) ಮಾಹಿತಿ ಹಂಚಿಕೊಂಡಿದ್ದಾರೆ. ಕಣ್ಣಿಗೆ(Eyes) ಲೆನ್ಸ್ ಹಾಕುವ ಪ್ರಯತ್ನದಲ್ಲಿ ಅವರು ಕಣ್ಣಿನ ಕಾರ್ನಿಯಲ್‌ಗೆ ಹಾನಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ದೃಷ್ಟಿಗೆ ತೊಂದರೆ ಆಗಿದೆ. ಇದರಿಂದ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಒಂದು ಕಣ್ಣಿಗೆ ಅವರು ಬ್ಯಾಂಡೇಜ್ ಹಾಕಿಕೊಂಡು ಫೋಟೋನ ಅಪ್ಲೋಡ್‌ ಮಾಡಿದ್ದಾರೆ. ಇದನ್ನು ನೋಡಿ ಅವರ ಫಾಲೋಯರ್ಸ್ ಗಾಬರಿಯಾಗಿದ್ದಾರೆ. ಜುಲೈ 17ರಂದು ನಾನು ದೆಹಲಿಯಲ್ಲಿ ಇದ್ದೆ. ಕಾರ್ಯಕ್ರಮ ಒಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ನನ್ನ ಕಾಂಟ್ಯಾಕ್ಟ್ ಲೆನ್ಸ್‌ನಲ್ಲಿ(Contact lens) ಏನು ಸಮಸ್ಯೆ ಆಯಿತು ಅನ್ನೋದು ಗೊತ್ತಿಲ್ಲ. ಅದನ್ನು ಧರಿಸಿದೆ. ಆಗ ನನ್ನ ಕಣ್ಣಿಗೆ ತೊಂದರೆ ಆಗೋಕೆ ಆರಂಭ ಆಯಿತು. ಕಣ್ಣು ಉರಿಯೋಕೆ ಆರಂಭಿಸಿತು. ನಂತರ ನಿಧಾನವಾಗಿ ಆ ಉರಿ ಹೆಚ್ಚಾಯಿತು ಎಂದಿದ್ದಾರೆ ಅವರು. ‘ನಾನು ವೈದ್ಯರ ನೋಡಬೇಕು ಎಂದುಕೊಂಡೆ. ಆದರೆ ಕೆಲಸದ ಕಾರಣದಿಂದ ಅದು ಸಾಧ್ಯವಾಗಿಲ್ಲ. ನಾನು ಮೊದಲು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆ ಬಳಿಕ ವೈದ್ಯರನ್ನು ನೋಡಬೇಕು ಎಂದುಕೊಂಡೆ. ಹೀಗಾಗಿ ಈವೆಂಟ್ನಲ್ಲಿ ನಾನು ಸನ್ಗ್ಲಾಸ್ ಧರಿಸಿದೆ. ಈ ವಿಚಾರವನ್ನು ನನ್ನ ಟೀಂನವರು ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡಿದರು. ಈ ಘಟನೆ ಬಳಿಕ ನನಗೆ ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್ಗೆ ಡ್ಯಾಮೇಜ್ ಆಗಿದೆಯಂತೆ. ಅವರು ಕಣ್ಣಿಗೆ ಬ್ಯಾಡ್ಜ್ ಹಾಕಿದ್ದಾರೆ’ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ಕಿಚ್ಚನ ಎಚ್ಚರಿಗೆ ಬಗ್ಗಿದ ಫೋನ್ ಪೇ ಸಿಇಓ..ಕನ್ನಡಿಗರಿಗೆ ಕ್ಷಮೆ ಕೇಳಿದ ಸಮೀರ್ ನಿಗಮ್

Related Video