Totapuri: ಕಿಚ್ಚ ಸುದೀಪ್ ಕುರಿತು ನವರಸ ನಾಯಕ ಜಗ್ಗೇಶ್ ಮಾತುಗಳು!

ನವರಸ ನಾಯಕ ಜಗ್ಗೇಶ್ ನಟಿಸಿ, ವಿಜಯ್  ಪ್ರಸಾದ್ ನಿರ್ದೇಶನ ಮಾಡಿರುವ 'ತೋತಾಪುರಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ  ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕಿಚ್ಚ ಸುದೀಪ್ 'ತೋತಾಪುರಿ' ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ನವರಸ ನಾಯಕ ಜಗ್ಗೇಶ್ (Jaggesh) ನಟಿಸಿ, ವಿಜಯ್ ಪ್ರಸಾದ್ (Vijay Prasad) ನಿರ್ದೇಶನ ಮಾಡಿರುವ 'ತೋತಾಪುರಿ' (Totapuri) ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕಿಚ್ಚ ಸುದೀಪ್ (Kiccha Sudeep) 'ತೋತಾಪುರಿ' ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು 'ಬಾಗ್ಲು ತೆಗಿ ಮೇರಿ ಜಾನ್' ಸಾಂಗ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈಗ ರಿಲೀಸ್ ಆಗಿರೋ 'ತೋತಾಪುರಿ' ಟ್ರೇಲರ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Totapuri: 'ಬಾಗ್ಲು ತೆಗಿ ಮೇರಿ ಜಾನ್' ಹಾಡು ಹಿಟ್ ಆಗಿದ್ದಕ್ಕೆ ಧನ್ಯವಾದ ತಿಳಿಸಿದ ಜಗ್ಗೇಶ್!

ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಡಬಲ್ ಮಿನಿಂಗ್ ಕಾಮಿಡಿ ಜುಗಲ್‌ಬಂದಿ ಜತೆ ಡಾಲಿ ಮತ್ತು ಸುಮನ್ ರಂಗನಾಥ್, ದತ್ತಣ್ಣ ನಟನೆ ನೋಡುಗರಿಗೆ ಕಾಮಿಡಿ ಕಿಕ್ ಕೊಡ್ತಿದೆ. ಡಿಫರೆಂಟ್ ಕಂಟೆಂಟ್ ಮೂಲಕ ನಟ ಜಗ್ಗೇಶ್ ಮತ್ತು ಅದಿತಿ ಪ್ರಭುದೇವಾ ನಟಿಸಿರೋ 'ತೋತಾಪುರಿ' ಟ್ರೇಲರ್ ಕಿಚ್ಚ ಸುದೀಪ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಜಗ್ಗೇಶ್ ಮತ್ತು ಅದಿತಿ ಕಾಂಬಿನೇಷನ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಸದ್ಯ ಎರಡು ಭಾಗಗಳಲ್ಲಿ 'ತೋತಾಪುರಿ' ಚಿತ್ರವು ತೆರೆಗೆ ಬರಲಿದ್ದು, ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ಡಾಲಿ ಧನಂಜಯ್, ವೀಣಾ ಸುಂದರ್‌ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಟ್ರೇಲರ್ ಲಾಂಚ್ ವೇಳೆ ಕಿಚ್ಚ ಸುದೀಪ್ ಕುರಿತು ನಟ ಜಗ್ಗೇಶ್ ಮಾತನಾಡಿದ್ದಾರೆ.

Related Video