ಐರಾ ಯಶ್‌ಗೆ ಐದನೇ ವರ್ಷದ ಅದ್ಧೂರಿ ಹುಟ್ಟುಹಬ್ಬ..! ಮಗಳ ಹುಟ್ಟುಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್- ರಾಧಿಕಾ..!

ರಾಧಿಕಾ ಪಂಡಿತ್ ಯಶ್ ಮುದ್ದಿನ ಮಗಳು ಐರಾ ಯಶ್. ಐರಾ ಯಶ್ ದಂಪತಿಗೆ ಅದೃಷ್ಟ ಲಕ್ಷ್ಮಿ. ಐರಾ ಬಂದ ಮೇಲೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ನೂರಾರು ಕೋಟಿಯ ಒಡೆಯನಾಗಿದ್ದು. ಯಶ್ ಮಗಳು ಹುಟ್ಟಿದ್ದು 2.12.2018ರಲ್ಲಿ, ಇದೀಗ ಯಶ್ ಮಗಳಿಗೆ ಐದು ವರ್ಷ ಆಗಿದೆ. ಹೀಗಾಗಿ ಐರಾ ಯಶ್‌ಗೆ ಅದ್ಧೂರಿ ಹುಟ್ಟುಹಬ್ಬ ಮಾಡಿದ್ದಾರೆ ಯಶ್ ದಂಪತಿ. ಆ ವೀಡಿಯೋವನ್ನ ರಾಧಿತಾ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

First Published Dec 14, 2023, 9:35 AM IST | Last Updated Dec 14, 2023, 9:35 AM IST

ರಾಕಿಂಗ್ ಸ್ಟಾರ್ ದಂಪತಿ ಏನೇ ಮಾಡಿದ್ರು ಅದು ಯುನೀಕ್ ಆಗಿರುತ್ತೆ. ಅದ್ಧೂರಿಯಾಗಿರುತ್ತೆ. ಇನ್ನು ಮನಗಳ ಬರ್ತ್ಡೇ ಅಂದ್ರೆ ಕೇಳ್ಬೇಕಾ..? ಸೆಲೆಬ್ರೇಷಬ್ 100 ಪಟ್ಟು ಜೋರಾಗಿರುತ್ತೆ. ಐರಾ(Ira) ಹುಟ್ಟುಹಬ್ಬವನ್ನೂ ಕೂಡ ವಿಶೇಷವಾಗಿ ಆಚರಿಸಿದ್ದಾರೆ. ಸ್ಟಾರ್ ಹೋಟೆಲ್‌ನಲ್ಲಿ ಮಗಳ ಜನ್ಮದಿನ ಸೆಲೆಬ್ರೇಷನ್ ಮಾಡಿದ್ದಾರೆ. ಯಶ್ ಮಗಳ ಹುಟ್ಟುಹಬ್ಬ(Birthday) ಐರಾಸ್ ವಿಂಟರ್ ಲ್ಯಾಂಡ್ ಥೀಮ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಈ ಬರ್ತಡೇ ಪಾರ್ಟಿಯಲ್ಲಿ ಯಶ್(Yash) ರಾಧಿಕಾ ಫ್ಯಾಮಿಲಿ ಮತ್ತು ಆಪ್ತ ಸ್ನೇಹಿತು ಭಾಗಿ ಆಗಿದ್ರು. 2.12.2018 ನನ್ನ ಏಂಜಲ್ ನಮ್ಮ ಜೀವನಕ್ಕೆ ಬಂದ ಸ್ಪೆಷಲ್ ಡೇ ಇದು. ಸಂತೋಷವನ್ನು ತಂದುಕೊಟ್ಟ ಮುದ್ದು ಮಗಳಿಗೆ ಈಗ 5 ವರ್ಷವಾಗಿದೆ ಎಂದ್ರೆ ನಂಬಲು ಆಗ್ತಿಲ್ಲ. ಲವ್ ಯೂ ಲಿಟ್ಲ್ ಗರ್ಲ್ ಎಂದು ರಾಧಿಕಾ ಪಂಡಿತ್(Radhika Pandit) ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಶೇರ್ ಮಾಡಿ ಬರೆದಿದ್ದಾರೆ. ಯಶ್ ಮಗಳ ವಿಡಿಯೋ ನೋಡಿದ ಫ್ಯಾನ್ಸ್ ಐರಾಗೆ ಬರ್ತ್ಡೇ ವಿಶ್ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ರಿಷಬ್ ಶೆಟ್ಟಿ ಕಾಂತಾರಕ್ಕಾಗಿ ಆಸೆ ಪಟ್ಟ ಸ್ಟಾರ್ ನಟಿಯರು..! ಟ್ವೀಟ್ ಮೂಲಕ ರಿಷಬ್ ಬಳಿ ಚಾನ್ಸ್ ಕೇಳಿದ ಪಾಯಲ್..!

Video Top Stories