ಜರ್ನಲಿಸ್ಟ್ ಕೊಲೆ..ತಮಿಳು ಸೂಪರ್ ಸ್ಟಾರ್ ಸೆರೆವಾಸ ! ಅಪರಾಧ ಲೋಕದಲ್ಲೂ ಸ್ಟಾರ್‌ಗಳದ್ದೇ ದರ್ಬಾರ್ !

ಕೊಲೆ ಕೇಸಿನಲ್ಲಿ ಜೈಲಿಗೆ ಹೋದ ಮೊದಲ ಸ್ಟಾರ್ ಹೀರೋ ಯಾರು.?
80 ವರ್ಷಗಳ ಹಿಂದಿನ ಸಿನಿಮಾ ಇಂಡಸ್ಟ್ರಿಯ ಫಸ್ಟ್ ಕ್ರೈಂ ಸ್ಟೋರಿ..!
ಪತ್ರಕರ್ತನ ಕೊಲೆ ಮಾಡಿ 30 ತಿಂಗಳು ಜೈಲು ಸೇರಿದ್ದ ಸ್ಟಾರ್ ನಟ..! 

First Published Jun 21, 2024, 9:20 AM IST | Last Updated Jun 21, 2024, 9:21 AM IST

ನಟ ದರ್ಶನ್​(Darshan) ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದು, ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಸ್ಟಾರ್ ನಟನೊಬ್ಬ, ಇಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಈಗಿನ ಚಿತ್ರೋದ್ಯಮಕ್ಕೆ, ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯಾಗಿದೆ. ಆದ್ರೆ, ಇಂತಹದ್ದೇ ಕೊಲೆ(Murder) ಕೇಸ್‌​ವೊಂದರಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ನಟನೊಬ್ಬ ಜೈಲು ಸೇರಿದ್ದ ಕಥೆ ಮತ್ತೆ ಮುನ್ನಲೆಗೆ ಬಂದಿದೆ. ಈ ತಮಿಳು ನಟ ಜೈಲು ಸೇರಿದ್ದು ಥೇಟ್​​ ಸಿನಿಮಾ ಕಥೆಯಂತೆಯೇ ಇದೆ. ಎಂಟು ದಶಕಗಳ ಹಿಂದಿನ ಈ ಘಟನೆ ಸೂಪರ್ ಸ್ಟಾರ್​ ನಟನ ಚಿತ್ರಬದುಕನ್ನೇ ನುಂಗಿ ಹಾಕಿ ಬೀದಿಗೆ ಎಸೆದಿತ್ತು. ಮಾಯಾವರಂ ಕೃಷ್ಣಸಾಮಿ ತ್ಯಾಗರಾಜ ಭಾಗವತರು ಅಲಿಯಾಸ್​ ಎಂ.ಕೆ. ತ್ಯಾಗರಾಜ ಭಾಗವತರ್(MK Thyagaraja Bhagavathar)​. ತಮಿಳು ಚಿತ್ರರಂಗದ ಮೊಟ್ಟಮೊದಲ ಸೂಪರ್​ ಸ್ಟಾರ್. 1944ರಲ್ಲಿ ಟಾಲಿವುಡ್‌​​ನಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಮನೆಮಾತಾಗಿದ್ದವರು ಭಾಗವತರ್​. ದುಬಾರಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟ. ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕರಾಗಿದ್ದ ಭಾಗವತರ್​, ಸ್ವತಃ ತಾವೇ ಬರೆದು ಹಾಡುತ್ತಿದ್ದರು. ಅವರ ಸಂಗೀತ ಕಚೇರಿಗಳಿಗೆ ಇನ್ನಿಲ್ಲದ ಡಿಮ್ಯಾಂಡ್​ ಇತ್ತು. 

ಇದನ್ನೂ ವೀಕ್ಷಿಸಿ:  ಕೊಲೆ ನಂತರ 12 ಸಾಕ್ಷಿಗಳ ನಾಶಕ್ಕೆ ದರ್ಶನ್‌ ಗ್ಯಾಂಗ್‌ ಯತ್ನ: ಪೊಲೀಸರಿಗೆ ಸಿಕ್ಕ ಸಾಕ್ಷಿಗಳು ಎಷ್ಟು ?

Video Top Stories