'ಯುವ' ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ಫಿಕ್ಸ್: ಅಪ್ಪು ಉತ್ತರಾಧಿಕಾರಿ ದರ್ಬಾರ್ ಶುರು ಯಾವಾಗ?

ದೊಡ್ಮನೆಯ ಅಭಿಮಾನಿಗಳ ನಿರೀಕ್ಷೆ ಯುವ ರಾಜ್ ಕುಮಾರ್ ಮೇಲೆ ಇದೆ. ಯುವ ಯಾವಾಗ ಹೊಸ ಸಿನಿಮಾ ಅನೌನ್ಸ್ ಮಾಡ್ತಾರೆ.? ಯಾವಾಗ ಶೂಟಿಂಗ್ ಶುರುವಾಗುತ್ತೆ ಅನ್ನೋ ಪ್ರಶ್ನೆಗಳು ದೊಡ್ಮನೆ ಫ್ಯಾನ್ಸ್ ಮಧ್ಯೆ ಚರ್ಚೆಗೆ ಬರುತ್ತಿವೆ. ಅದಕ್ಕೆ ಈಗ ಉತ್ತರವೂ ಸಿಕ್ಕಿದೆ. 

Share this Video
  • FB
  • Linkdin
  • Whatsapp

ಯುವರಾಜ್ ಕುಮಾರ್ ಫಸ್ಟ್ ಸಿನಿಮಾ ಡೈರೆಕ್ಟ್ ಮಾಡೋದು ಸಂತೋಷ್ ಆನಂದ್ ರಾಮ್, ನಿರ್ಮಾಣದ ಜವಾಬ್ದಾರಿ ಹೊತ್ತಿರೋದು ಹೊಂಬಾಳೆ ಫಿಲ್ಮ್ಸ್ ಅನ್ನೋದು ನಿಮ್ಗೆ ಗೊತ್ತಿರೋ ವಿಷಯ. ಈ ಸಿನಿಮಾ ಅನೌನ್ಸ್ ಆಗಿ ಅರ್ಧ ವರ್ಷ ಆಗ್ತಾ ಬರ್ತಿದೆ. ಇದೀಗ ಸಿಂಪಲ್ ಆಗಿ ಸಿನಿಮಾ ಅನೌನ್ಸ್ ಮಾಡಿರೋ ಹೊಂಬಾಳೆ, ಯುವನ ಮೊದಲ ಸಿನಿಮಾದ ಮುಹೂರ್ತವನ್ನು ಧನುರ್ಮಾಸ ಮುಗಿಯುತ್ತಿದಂತೆ ಜನವರಿ ಕೊನೆ ವಾರದಲ್ಲಿ ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆದಿದೆ. ಫೆಬ್ರವರಿ 18ರಿಂದ ಶೂಟಿಂಗ್ ಸೆಟ್ಟಿನಲ್ಲಿ ಯುವ ಕಾಣಿಸಿಕೊಳ್ಳಲಿದ್ದಾರೆ ಅಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಶೆಡ್ಯೂಲ್ ಸ್ಕೆಚ್ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video