ಸಿಕ್ಸ್​ ಪ್ಯಾಕ್ ಇಟ್ಟಿರೋ ಹೀರೋಯಿನ್ ಸಪ್ತಮಿ ಗೌಡ: ಸಿಂಗಾರ ಸಿರಿಯ ಸೌಂದರ್ಯದ ಗುಟ್ಟು ರಟ್ಟು!

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ. 

First Published Dec 22, 2024, 4:12 PM IST | Last Updated Dec 22, 2024, 4:12 PM IST

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ. ಪಾಪ್​ ಕಾರ್ನ್​ ಮಂಕಿ ಟೈಗರ್​​ ಸಿನಿಮಾದಲ್ಲಿ ಪಕ್ಕಾ ಲೋಕಲ್​ ಡೈಲಾಗ್​ ಹೊಡೆದು. ಕಾಂತಾರ ಚಿತ್ರದಲ್ಲಿ ಸಿಂಗಾರ ಸಿರಿ ಆಗಿ ಮಿಂಚಿ ಪಡ್ಡೆ ಹುಡುಗರ ಹಾರ್ಟ್​​ನ ಬೀಗ ಓಪನ್ ಮಾಡಿದ್ರು ಸಪ್ತಮಿ ಗೌಡ. ಅಪ್ಪಟ ಕನ್ನಡತಿ ಮಳವಳ್ಳಿ ಬೇಬಿ ಸೌಂದರ್ಯಕ್ಕೆ ಲಕ್ಷಾಂತರ ಮಂದಿ ಫ್ಯಾನ್ ಆಗಿದ್ದಾರೆ. ಸಪ್ತಮಿ ಸೌಂದರ್ಯದ ಗುಟ್ಟು ಇವಳ ವರ್ಕೌಟು.. ಪ್ರತಿ ದಿನ ತನ್ನ ಮಸಲ್ ಮೇಲೆ  ಪ್ರಯೋಗ ಮಾಡೋ ಸಪ್ತಮಿ ಜಿಮ್​ನಲ್ಲಿ ಸಿಕ್ಕಾಪಟ್ಟೆ ಬೆವರು ಹರಿಸ್ತಾರೆ. ಸಪ್ತಮಿಯ ಒಂದೊಂದು ವರ್ಕೌಟ್ ವೀಡಿಯೋಗಳು ಗಂಡ್ ಹೈಕ್ಳ ಎದೆ ಝಲ್ ಎನ್ನೋ ಹಾಗಿವೆ. ಸಿಕ್ಸ್​ ಪ್ಯಾಕ್ ಇಟ್ಟಿರೋ ಹೀರೋಯಿನ್ ಸಪ್ತಮಿ ಗೌಡ.. ಈ ಹುಡುಗಿಗೆ ಜಿಮ್​​ ಇಲ್ಲ ಅಂದ್ರೆ ದಿನವೇ ಸ್ಟಾರ್ಟ್ ಆಗಲ್ಲ. ಅಷ್ಟರ ಮಟ್ಟಿಗೆ ಫಿಟ್ನೆಸ್​ ಫ್ರೀಕ್. ಹೀಗಾಗೆ ಸಪ್ತಮಿ ಗೌಡ ಸಿಂಗಾರ ಸಿರಿಯಾಗಿ ಸೌಂಧರ್ಯ ದೇವತೆಯಾಗಿ ಕಂಗೊಳಿಸುತ್ತಿದ್ದಾರೆ.