
Vedha Movie: ಇಂದಿನಿಂದ ಬೆಳ್ಳಿತೆರೆಯಲ್ಲಿ 'ವೇದ'ನ ಘರ್ಜನೆ: ದಾಖಲೆ ಬರೆದ ಶಿವಣ್ಣನ ಅಭಿಮಾನಿಗಳು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ 'ವೇದ' ಸಿನಿಮಾ, ಬೆಂಗಳೂರು ಸೇರಿ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಇಂದು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ 'ವೇದ' ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಬೆಳಿಗ್ಗೆ 5 ಗಂಟೆಯಿಂದ ಪ್ರದರ್ಶನ ಶುರುವಾಗಿದ್ದು, ಶಿವಣ್ಣನ ಅಭಿಮಾನಿಗಳು ಹೂ ಹಾರ, ಪಟಾಕಿ ಸಿಡಿಸಿ ಚಿತ್ರಮಂದಿರದಲ್ಲಿ ಜಾತ್ರೆ ಮಾಡಿದ್ದಾರೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ವೇದ ಸಿನಿಮಾದ ಫ್ಯಾನ್ಸ್ ಶೋ ಹಾಕಲಾಗಿದೆ. ಆ ಫ್ಯಾನ್ಸ್ ಶೋ ಟಿಕೆಟ್'ಗಳು ಆಲ್ ಮೋಸ್ಟ್ ಸೋಲ್ಡ್ ಔಟ್ ಆಗಿವೆ. ಇನ್ನು ಅಭಿಮಾನಿಗಳು 54 ಆಟೋಗಳನ್ನು ಬಳಸಿಕೊಂಡು ವೇದ ಅನ್ನೋ ಹೆಸರನ್ನು ದಾಖಲೆ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ